ನವದೆಹಲಿ: ಸ್ಯಾಮ್‍ಸಂಗ್, ಆಪಲ್, ಫಾಕ್ಸ್‍ಕಾನ್ ಹೊನ್ ಹೈ, ರೈಸಿಂಗ್ ಸ್ಟಾರ್, ವಿಸ್ಟ್ರಾನ್ ಮತ್ತು ಪೆಗಾಟ್ರಾನ್ ಸೇರಿದಂತೆ 22 ಕಂಪನಿಗಳು ಮೇಕ್ ಇನ್ ಇಂಡಿಯಾ ಮೂಲಕ ಭಾರತದಲ್ಲೇ ಮೊಬೈಲ್ ಫೆÇೀನ್ ಗಳನ್ನು ಉತ್ಪಾದಿಸಲು ಮುಂದಾಗಿದ್ದು ಈ ಮೂಲಕ 3 ಲಕ್ಷ ಉದ್ಯೋಗ ಸೃಷ್ಠಿಯಾಗಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಮುಂದಿನ ಐದು ವರ್ಷಗಳಲ್ಲಿ ಪೆÇ್ರಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ (ಪಿ ಎಲ್ ಐ) ಯೋಜನೆಯಡಿ ಭಾರತದಲ್ಲಿ 11.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೆÇೀನ್ ಹಾಗೂ ಬಿಡಿಭಾಗಗಳನ್ನು ಉತ್ಪಾದಿಸಲಾಗುವುದು. ಇದಕ್ಕಾಗಿ 22 ಕಂಪನಿಗಳು ಅರ್ಜಿ ಸಲ್ಲಿಸಿದ್ದು ಅದರಲ್ಲಿ 7 ಲಕ್ಷ ಕೋಟಿ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರವಿಶಂಕರ್ ಪ್ರಸಾದ್ ಈ ಕಂಪನಿಗಳು ಮೂರು ಲಕ್ಷ ನೇರ ಮತ್ತು ಸುಮಾರು ಒಂಬತ್ತು ಲಕ್ಷ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂದರು. ಆದರೆ ಇದೇ ವೇಳೆ ಈ ಯೋಜನೆ ಯಾವುದೇ ದೇಶದ ವಿರುದ್ಧವಾಗಿಲ್ಲ. ಇದು ಭಾರತ ಸಕಾರಾತ್ಮಕವಾಗಿದೆ ಎಂದು ಹೇಳುವ ಯೋಜನೆಯಾಗಿದೆ. "ನಾನು ಯಾವುದೇ ದೇಶದ ಹೆಸರನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ನಮ್ಮ ಭದ್ರತೆ, ಗಡಿರೇಖೆಯ ದೇಶಗಳಿಗೆ ಸಂಬಂಧಿಸಿದಂತೆ ನಮಗೆ ನಮ್ಮದೇ ನಿಯಮಾವಳಿಗಳಿದೆ"
"ನಾವು ಆಶಾವಾದಿಯಾಗಿದ್ದೇವೆ ಮತ್ತು ನಮ್ಮ ವ್ಯಾಲ್ಯೂ ಚೈನ್ ಮೂಲಕ ಜಾಗತಿಕ ವ್ಯಾಲ್ಯೂ ಚೈನ್ ಜತೆಗೆ ಸಂಒಅರ್ಕ ಸಾಧಿಸಲು ಚಿಂತನ ನಡೆಸಿದ್ದೇವೆ. ಇದರಿಂದಾಗಿ ದೇಶದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಾತಾವರಣವನ್ನು ಬಲಪಡಿಸುತ್ತೇವೆ" ಎಂದು ಅವರು ಹೇಳಿದರು. ಜಾಗತಿಕ ಮತ್ತು ದೇಶೀಯ ಮೊಬೈಲ್ ಫೆÇೀನ್ ಉತ್ಪಾದನಾ ಕಂಪನಿಗಳು ಮತ್ತು ಎಲೆಕ್ಟ್ರಾನಿಕ್ ಘಟಕಗಳ ತಯಾರಕರಿಂದ ಪಡೆದ ಅರ್ಜಿಗಳ ವಿಷಯದಲ್ಲಿ ಪಿ ಎಲ್ ಐ ಯೋಜನೆ ಭಾರಿ ಯಶಸ್ಸನ್ನು ಕಂಡಿದೆ ಎಂದು ಪ್ರಸಾದ್ ಹೇಳಿದರು.