ನವದೆಹಲಿ: ಮಾರ್ಚ್ 11 ರಿಂದ ಇದುವರೆಗೂ 3.04 ಕೋಟಿ ಎನ್ 95 ಮಾಸ್ಕ್ ಗಳು ಮತ್ತು 1.28 ಕೋಟಿ ಪಿಪಿಇ ಕಿಟ್ ಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ನೀಡಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಜೊತೆಗೆ 10.83 ಕೋಟಿ ಹೆಚ್ ಸಿ ಕ್ಯೂ ಮಾತ್ರೆಗಳನ್ನು ವಿತರಣೆ ಮಾಡಲಾಗಿದೆ ಎಂದು ತಿಳಿಸಿದೆ.ಇದರ ಜೊತೆಗೆ ಹೆಚ್ಚುವರಿಯಾಗಿ 22,533 ಮೇಕ್ ಇನ್ ಇಂಡಿಯಾ ವೆಂಟಿಲೇಟರ್ ಗಳನ್ನು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ.
ಕೊರೋನಾ ಸಾಂಕ್ರಾಮಿಕ ರೋಗವನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸವಲತ್ತುಗಳನ್ನು ಸದೃಢಗೊಳಿಸಲು ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಕೊರೋನಾ ಸೌಲಭ್ಯಗಳನ್ನು ಹೆಚ್ಚಿಸುವುದರ ಜೊತೆಗೆ, ಕೇಂದ್ರಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ವೈದ್ಯಕೀಯ ಸಾಮಾಗ್ರಿಗಳನ್ನು ಒದಗಿಸುತ್ತಿದೆ, "ಭಾರತ ಸರ್ಕಾರವು ಸರಬರಾಜು ಮಾಡಿದ ಹೆಚ್ಚಿನ ಉತ್ಪನ್ನಗಳನ್ನು ಆರಂಭದಲ್ಲಿ ದೇಶದಲ್ಲಿ ತಯಾರಿಸಲಾಗಲಿಲ್ಲ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿತು.
ಆರೋಗ್ಯ ಸಚಿವಾಲಯ, ಜವಳಿ ಸಚಿವಾಲಯ, ವೈದ್ಯಕೀಯ ಸಚಿವಾಲಯ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪ್ರಯತ್ನದಿಂದ, ದೇಶೀಯ ಉದ್ಯಮವನ್ನು ಪ್ರೋತ್ಸಾಹಿಸಲಾಗಿದೆ, ಪಿಪಿಇಗಳು, ಎನ್ 95 ಮಾಸ್ಕ್, ವೆಂಟಿಲೇಟರ್ಗಳು ಮುಂತಾದ ಅಗತ್ಯ ವೈದ್ಯಕೀಯ ಉಪಕರಣಗಳನ್ನು ತಯಾರಿಸಿ ಸರಬರಾಜು ಮಾಡಲಾಯಿತು ಎಂದು ಆರೋಗ್ಯ ಸಚಿವಾಲ ಮಾಹಿತಿ ನೀಡಿದೆ.