ಕೋಝಿಕ್ಕೋಡ್: ಕರಿಪುರದಲ್ಲಿ ಏರ್ ಇಂಡಿಯಾ ಎಕ್ಸ್‍ಪ್ರೆಸ್ ಐಎಕ್ಸ್ 1344 ಬೋಯಿಂಗ್ 737 ಅಪಘಾತಕ್ಕೀಡಾದಾಗ, ಸಾವಿನ ಮೊದಲ ಸುದ್ದಿ ಕ್ಯಾಪ್ಟನ್ ಡಿ.ವಿ.ಸಾಥೆ ಅವರದಾಗಿತ್ತು. ಕ್ಯಾಪ್ಟನ್ ಸಾಥೆ ಅವರು ಪೈಲಟ್ ಆಗಿ ಮೂವತ್ತು ವರ್ಷಗಳಿಗಿಂತ ಹೆಚ್ಚು ಸೇವಾ ಅನುಭವ ಹೊಂದಿರುವ ಅಧಿಕಾರಿಯಾಗಿದ್ದರು.
ಸುದೀರ್ಘಕಾಲದವರೆಗೆ ವಿವಿಧ ವಿಮಾನಗಳನ್ನು ಹಾರಾಟ ನಡೆಸುತ್ತಿರುವ ಡಿ.ವಿ.ಸಾಥೆ ನಿನ್ನೆಗಿಂತಲೂ ಕೆಟ್ಟ ಹವಾಮಾನ ಪರಿಸ್ಥಿತಿಗಳಲ್ಲಿ ಹಲವು ಬಾರಿ ಯಶಸ್ವಿಯಾಗಿ ವಿಮಾನ ಇಳಿಸಿದ ಅನುಭವಿಗಳು. ಅವರನ್ನು ಹತ್ತಿರದಿಂದ ಬಲ್ಲ ಬಂಧು-ಮಿತ್ರರಿಗೆ ಸಾಥೆಯವರ ಕಣ್ಮರೆ ನಂಬಲಾಗದಂತಾಗಿದೆ. ಅವರ ಕುಟುಂಬಕ್ಕೆ ಸಂತಾಪ ಸೂಚಿಸುವ ಹಲವು ಸಂದೇಶಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ವಿಂಗ್ ಕಮಾಂಡರ್ ದೀಪಕ್ ವಸಂತ್ ಸಾಥೆ ಭಾರತೀಯ ವಾಯುಪಡೆಯ ವಲಯಗಳಲ್ಲಿ ಅತ್ಯಂತ ಪ್ರಾಮಾಣಿಕ ಗೌರವಯುತ ಹೆಸರುಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ 58 ನೇ ತಂಡದಲ್ಲಿ ರಾಷ್ಟ್ರಪತಿಗಳ ಚಿನ್ನದ ಪದಕ ಗೆದ್ದ ನಂತರ 1981 ರಲ್ಲಿ ದೀಪಕ್ ವಸಂತ್ ಸಾಥೆ ಅವರನ್ನು ಭಾರತೀಯ ವಾಯುಪಡೆಗೆ ನಿಯೋಜಿಸಲಾಯಿತು. ಮತ್ತು ನಂತರ ಭಾರತೀಯ ವಾಯುಪಡೆಯ 127 ನೇ ತಂಡದಲ್ಲಿ ಸ್ವೋರ್ಡ್ ಆಫ್ ಆನರ್ ಜೊತೆ ಮೊದಲ ತರಬೇತಿಯನ್ನು ಪೂರೈಸಿದ್ದರು.
ಭಾರತೀಯ ವಾಯುಸೇನೆಯಲ್ಲಿ ಸುದೀರ್ಘ ಸೇವೆಯ ನಂತರ, ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‍ಗೆ ಎಕ್ಸ್‍ಪರ್ಟ್ ಟೆಸ್ಟ್ ಪೈಲಟ್ ಆಗಿ ಸೇರಿಕೊಂಡರು. ಮತ್ತು ಏರ್ ಇಂಡಿಯಾದಿಂದ ನಿವೃತ್ತಿಯಾದ ನಂತರ ಅವರು ಏರ್ ಇಂಡಿಯಾ ಪ್ಯಾಸೆಂಜರ್ ಏಕ್ರ್ರಾಫ್ಟ್ ಪೈಲಟ್ ಆಗಿ ಸೇರಿದರು. ಅವರು ಮೊದಲು ಏರ್ ಇಂಡಿಯಾಕ್ಕಾಗಿ ಏರ್ ಬಸ್ 310 ನ್ನು ಹಾರಿಸಿದ್ದರು. ಬಳಿಕ ಏರ್ ಇಂಡಿಯಾ ಎಕ್ಸ್ ಪ್ರೆಸ್ ಬೋಯಿಂಗ್ 737 ಗೆ ಸ್ಥಳಾಂತರಗೊಂಡಿದ್ದರು.