ನವದೆಹಲಿ: ಆಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಗಾಗಿ ಸೋಮವಾರದಿಂದಲೇ ಸಂಭ್ರಮ, ಸಡಗರ ಆರಂಭಗೊಂಡಿವೆ, ಮುಹೂರ್ತದ ಸಮಯ ಮಾತ್ರ ಕೇವಲ ಕೆಲವೇ ಸೆಕೆಂಡುಗಳು ಮಾತ್ರವಂತೆ.
ಶುಭಗಳಿಗೆ ಕೇವಲ ಕೆಲವೇ ಸೆಕೆಂಡುಗಳು ಮಾತ್ರವೇ ಎಂದು ಅರ್ಚಕರು, ಧಾರ್ಮಿಕ ಹಿರಿಯರ ಅಭಿಮತವಾಗಿದೆ.
ಅವರು ಹೇಳುವ ಪ್ರಕಾರ ಮುಹೂರ್ತ (ಶುಭಗಳಿಗೆ) 32 ಸೆಕೆಂಡುಗಳು ಮಾತ್ರವಂತೆ. ಅಂದರೆ ಆ 32 ಸೆಕೆಂಡುಗಳೊಳಗೆ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನಡೆಸಲಿದ್ದಾರೆ. ಬುಧವಾರ ಮಧ್ಯಾಹ್ನ 12 ಗಂಟೆ 44ನಿಮಿಷ 8 ಸೆಕೆಂಡಿಗೆ ಮುಹೂರ್ತ ಆರಂಭಗೊಂಡು, 12 ಗಂಟೆ 44 ನಿಮಿಷ 44 ಸೆಕೆಂಡಿಗೆ ಪೂರ್ಣವಾಗಲಿದೆಯಂತೆ.