ಕೋಝಿಕ್ಕೋಡ್: ಕೋಝಿಕ್ಕೋಡಿನ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಮತ್ತು ಐಫೆÇೀನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೂಗಳ ಒಳಗೆ ಕಳ್ಳಸಾಗಣೆ ಮಾಡಲು ಯತ್ನಿಸಿದ ಪ್ರಯಾಣಿಕನೋರ್ವನಿಂದ ಗುರುವಾರ 117 ಗ್ರಾಂ ಚಿನ್ನ ಮತ್ತು 40 ಐಫೆÇೀನ್‍ಗಳನ್ನು ಪ್ಯೋಮಯಾನ ಗುಪ್ತಚರ ಘಟಕ (ಎಐಯು) ವಶಪಡಿಸಿಕೊಂಡಿದೆ.
ದುಬೈನ ಪ್ರಯಾಣಿಕರಿಂದ ಚಿನ್ನ ಮತ್ತು ಫೆÇೀನ್‍ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಶೂ ಒಳಗೆ ವಿಶೇಷ ವಿಭಾಗದಲ್ಲಿ ಚಿನ್ನವನ್ನು ಅಡಗಿಸಿಡಲಾಗಿತ್ತು. ನಾಣ್ಯಗಳ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಲಾಗುತ್ತಿದ್ದುದು ಗಮನಕ್ಕೆ ಬಂದಿದ್ದು ಅಧಿಕಾರಿಗಳ ಬೆರಗಿಗೂ ಕಾರಣವಾಗಿದೆ. ಅದೇ ವಿಮಾನದಲ್ಲಿದ್ದ ಸಾಗಾಣಿಕೆಯ ಸೂತ್ರಧಾರನ್ನು ಬಂಧಿಸಿ ಫೆÇೀನ್‍ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಫೆÇೀನ್ ಗಳನ್ನು ವಿಶೇಷ ಕವರ್ ಮತ್ತು ಚೀಲದಲ್ಲಿ ಇರಿಸಲಾಗಿತ್ತು.