ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 48 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 38 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. ಇವರಲ್ಲಿ ಇಬ್ಬರ ಸಂಪರ್ಕಮೂಲ ಪತ್ತೆಯಾಗಿಲ್ಲ. 4 ಮಂದಿ ವಿದೇಶದಿಂದ, 6 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ. 203 ಮಂದಿ ಗುಣಮುಖರಾಗಿದ್ದಾರೆ.
ಪಂಚಾಯತಿವಾರು ವಿವರಗಳು:
ಕಾಸರಗೋಡು ನಗರಸಭೆ 4, ಮಧೂರು ಪಂಚಾಯತ್ 1, ಕುಂಬಳೆ ಪಂಚಾಯತ್ 2, ಚೆಂಗಳ ಪಂಚಾಯತ್ 1, ಚೆಮ್ನಾಡ್ ಪಂಚಾಯತ್ 5, ಮಂಗಲ್ಪಾಡಿ ಪಂಚಾಯತ್ 2, ಪೈವಳಿಕೆ ಪಂಚಾಯತ್ 1, ಎಣ್ಮಕಜೆ ಪಂಚಾಯತ್ 1, ಪಳ್ಳಿಕ್ಕರೆ ಪಂಚಾಯತ್ 8, ಕಾಂಞಂಗಾಡ್ ನಗರಸಭೆ 12, ಮಡಿಕೈ ಪಂಚಾಯತ್ 1, ಅಜಾನೂರು ಪಂಚಾಯತ್ 1, ಕಿನಾನೂರು-ಕರಿಂದಳಂ ಪಂಚಾಯತ್ 1, ಪನತ್ತಡಿ ಪಂಚಾಯತ್ 2, ಚೆರುವತ್ತೂರು ಪಂಚಾಯತ್ 2, ತ್ರಿಕರಿಪುರ ಪಂಚಾಯತ್ 2, ಕಯ್ಯೂರು-ಚೀಮೇನಿ ಪಂಚಾಯತ್ 1, ಕಳ್ಳಾರ್ ಪಂಚಾಯತ್ 1 ಮಂದಿಗೆ ಸೋಂಕು ಖಚಿತವಾಗಿದೆ.
5068 ಮಂದಿ ನಿಗಾದಲ್ಲಿ : ಕಾಸರಗೋಡು ಜಿಲ್ಲೆಯಲ್ಲಿ 5068 ಮಂದಿ ನಿಗಾದಲ್ಲಿ ದ್ದಾರೆ ಎಂದು ಆರೋಗ್ಯ ಇಲಾಖೆಯ ವರದಿ ತಿಳಿಸಿದೆ. ಮನೆಗಳಲ್ಲಿ 3741 ಮಂದಿ, ಸಾಂಸ್ಥಿಕವಾಗಿ 327 ಮಂದಿ ನಿಗಾದಲ್ಲಿರುವರು. ನೂತನವಾಗಿ 395 ಮಂದಿ ನಿಗಾ ಪ್ರವೇಶಿಸಿದ್ದಾರೆ. ನೂತನವಾಗಿ 974 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 686 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಕೊರೊನಾದಿಂದ ಇಬ್ಬರ ಸಾವು : ಸಂಪರ್ಕದ ಮೂಲಕ ಕೊರೊನಾ ಸೋಂಕು ಬಾಧಿಸಿದ ಕಾಸರಗೋಡು ನಗರಸಭಾ ವ್ಯಾಪ್ತಿಯ 71 ವರ್ಷ ಪ್ರಾಯದ ವೃದ್ಧ ಸಾವಿಗೀಡಾದರು. ಆ.10 ರಂದು ಎದೆ ನೋವಿನ ಹಿನ್ನೆಲೆಯಲ್ಲಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆಯಲ್ಲಿ ಕೊರೊನಾ ಸೋಂಕು ದೃಢೀಕರಣಗೊಂಡ ಹಿನ್ನೆಲೆಯಲ್ಲಿ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಸಾವಿಗೀಡಾದರು.
ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದ ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಏಳು ತಿಂಗಳ ಮಗು ಸಾವಿಗೀಡಾಯಿತು.