ನವದೆಹಲಿ: ಕೊರೋನಾ ನಡುವೆಯೇ ಯುರೋಪ್ ನಲ್ಲಿರುವ ಏರ್ ಇಂಡಿಯಾದ 5 ಕಚೇರಿಗಳಿಗೆ ಬೀಗ ಹಾಕಲಾಗಿದೆ.
ಕೊರೋನಾ ಹಿನ್ನೆಲೆಯಲ್ಲಿ ಯಾವುದೇ ವಿಮಾನಗಳು ಅಂತಾರಾಷ್ಟ್ರೀಯವಾಗಿ ಹಾರಾಟ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿಯೆನ್ನಾ (ಆಸ್ಟ್ರಿಯಾ), ಮಿಲಾನ್ (ಇಟಾಲಿ) ಮಾಡ್ರಿಡ್ (ಸ್ಪೇನ್), ಕೋಪನ್ ಹ್ಯಾಗನ್ (ಡೆನ್ಮಾರ್ಕ್) ಸ್ಟಾಕ್ಹೋಮ್ (ಸ್ವೀಡನ್) ನಲ್ಲಿ ಏರ್ ಇಂಡಿಯಾ ಕಚೇರಿಗಳನ್ನು ಬಂದ್ ಮಾಡಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ವಂದೇ ಭಾರತ್ ಮಿಷನ್ ಅಡಿಯಲ್ಲಿ ಏರ್ ಇಂಡಿಯಾದ ಯಾವುದೇ ವಿಮಾನಗಳೂ ಕಾರ್ಯನಿರ್ವಹಣೆ ಮಾಡುತ್ತಿಲ್ಲ. ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದ ವಿಮಾನಗಳೂ ಸಹ ಕಾರ್ಯನಿರ್ವಹಣೆ ಮಾಡುತ್ತಿಲ್ಲ ಎಂದು ವಕ್ತಾರರು ಹೇಳಿದ್ದಾರೆ.