ಕಾಸರಗೋಡು: "ಕೂಗಳತೆಯಲ್ಲಿದ್ದಾರೆ ಕೃಷಿ ಸಚಿವ" ಎಂಬ ಕಾರ್ಯಕ್ರಮದ ಅಂಗವಾಗಿ ರಾಜ್ಯ ಕೃಷಿ ಸಚಿವ ನ್ಯಾಯವಾದಿ ವಿ.ಎಸ್.ಸುನಿಲ್ ಕುಮಾರ್ ಅವರು ಆ.5ರಂದು ಮಧ್ಯಾಹ್ನ 3 ಗಂಟೆಗೆ ಕೃಷಿಕರೊಂದಿಗೆ ನೇರ ಸಂವಾದ ನಡೆಸಲಿದ್ದಾರೆ. ಮಾಹಿತಿ ತಂತ್ರಜ್ಞಾನ ಇಲಾಖೆಯ ಫೆಸ್ಬುಕ್ ಪುಟದಲ್ಲಿ ಲೈವ್ ಆಗಿ ಈ ಪ್ರಸಾರ ನಡೆಯಲಿದೆ. ಕೃಷಿಕರು 18004251661 ಎಂಬ ಟಾಲ್ ಫ್ರೀ ನಂಬ್ರ ಮೂಲಕ ಕರೆಮಾಡಬಹುದು ಯಾ 9447051661 ಎಂಬ ವಾಟ್ಸ್ ಆಪ್ ನಂಬ್ರಕ್ಕೆ ಸಂದೇಶ ಕಳುಹಿಸಬಹುದು.