ಕಾಸರಗೋಡು: "ಆದ್ರ್ರ" ಯೋಜನೆಯಲ್ಲಿ ಕಾಸರಗೋಡು ಜಿಲ್ಲೆಯ ಹೆಚ್ಚುವರಿ 5 ಕುಟುಂಬ ಆರೋಗ್ಯ ಕೇಂದ್ರಗಳೂ ಸೇರಿರುವುದು ಆರೋಗ್ಯ ವಲಯದ ಅಭಿವೃದ್ಧಿಗೆ ಪೂರಕವಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವೀಡಿಯೋ ಕಾನ್ ಫೆರೆನ್ಸ್ ಮೂಲಕ ಈ ಕಾರ್ಯಕ್ಕೆ ಚಾಲನೆ ನೀಡಿದರು.
ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳ ರೋಗಿ ಸೌಹಾರ್ಧ ಶುಶ್ರೂಷೆ ಕೇಂದ್ರಗಳಾಗಿಸಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ""ಆದ್ರರ್ಂ" " ಯೋಜನೆ ಜಾರಿಗೊಳಿಸುತ್ತಿದೆ. ಯೋಜನೆಯ ಎರಡನೇ ಹಂತದಲ್ಲಿ ಕಾಸರಗೋಡು ಜಿಲ್ಲೆಗೆ ಮಂಜೂರು ಮಾಡಲಾಗಿರುವ 22 ಕುಟುಂಬ ಆರೋಗ್ಯ ಕೇಂದ್ರಗಳ ಪಟ್ಟಿಗೆ ಈ ಕೇಂದ್ರಗಳೂ ಸೇರಿವೆ.
ಜಿಲ್ಲೆಯ ಚೆಮ್ನಾಡ್ ಗ್ರಾಮ ಪಂಚಾಯತ್ ನ ಚಟ್ಟಂಚಾಲ್ ಕುಟುಂಬ ಆರೋಗ್ಯ ಕೇಂದ್ರ, ವೆಸ್ಟ್ ಏಳೇರಿ ಗ್ರಾಮಪಂಚಾಯತ್ ನ ಮೌಕೋಡ್ ಕುಟುಂಬ ಆರೋಗ್ಯ ಕೇಂದ್ರ, ಪಡನ್ನ ಗ್ರಾಮಪಂಚಾಯತ್ ನ ಪಡನ್ನ ಕುಟುಂಬ ಆರೋಗ್ಯ ಕೇಂದ್ರ, ತ್ರಿಕರಿಪುರ ಗ್ರಾಮ ಪಂಚಾಯತ್ ನ ಉಡುಂಬುಂತಲ ಕುಟುಂಬ ಆರೋಗ್ಯ ಕೇಂದ್ರ, ವಲಿಯಪರಂಬ ಗ್ರಾಮಪಂಚಾಯತ್ ನ ವಲಿಯಪರಂಬ ಕುಟುಂಬ ಆರೋಗ್ಯ ಕೇಂದ್ರಗಳನ್ನು ಆದ್ರರ್ಂ ಯೋಜನೆಯಲ್ಲಿ ಅಳವಡಿಸಲಾಗಿದೆ.
ಈ ಮೂಲಕ ಈ ಆಸ್ಪತ್ರೆಗಳಲ್ಲಿ ಸಂಜೆ ಒ.ಪಿ. ಸೌಲಭ್ಯ, ಪ್ರಯೋಗಾಲಯ ಸೇವೆ, ಜನ ಸ್ನೇಹಿ ಸೌಲಭ್ಯಗಳು, ಶಿಶು ಸ್ನೇಹಿ ಇಮ್ಯೂನೇಷನ್ ರೂಂ, ಅಗತ್ಯ ಔಷಧಗಳ ಲಭ್ಯತೆ, ಆಶ್ವಾಸ್ ಕ್ಲಿನಿಕ್, ಮಾನಸಿಕ ಆರೋಗ್ಯ ಕ್ಲಿನಿಕ್, ಶ್ವಾಸಕೋಶ ಆರೋಗ್ಯ ಕೇಂದ್ರ ಶ್ವಾಸ್ ಕ್ಲಿನಿಕ್ ಇತ್ಯಾದಿ ಒದಗಲಿವೆ.
ವೀಡಿಯೋ ಕಾನ್ ಫೆರೆನ್ಸ್ ಮೂಲಕ ಉದ್ಘಾಟನೆ:
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವೀಡಿಯೋ ಕಾನ್ ಫೆರೆನ್ಸ್ ಮೂಲಕ ಈ ಕಾರ್ಯಕ್ಕೆ ಚಾಲನೆ ನೀಡಿದರು. ಆರೋಗ್ಯ ಸಚಿವ ಕೆ.ಕೆ.ಶೈಲಜಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು.
ವಿಧಾನ ಸಭಾಧ್ಯಕ್ಷ ಪಿ.ಶ್ರೀರಾಮಕೃಷ್ಣನ್, ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್, ಸಂಚಾರ ಸಚಿವ ಎ.ಕೆ.ಶಶೀಂದ್ರನ್, ಬಂದರು ಸಚಿವ ಕಡನ್ನಪಳ್ಳಿ ರಾಮಚಂದ್ರನ್, ಉದ್ದಿಮೆ ಸಚಿವ ಇ.ಪಿ.ಜಯರಾಜನ್, ಪರಿಶಿಷ್ಟ ಜಾತಿ-ಪಂಗಡ ಕಲ್ಯಾಣ ಇಲಾಖೆ ಸಚಿವ ಎ.ಕೆ.ಬಾಲನ್, ನೀರಾವರಿ ಸಚಿವ ಕೆ.ಕೃಷ್ಣನ್ ಕುಟ್ಟಿ ಮುಖ್ಯ ಅತಿಥಿಯಾಗಿದ್ದರು. ಆರೋಗ್ಯ ಇಲಾಖೆ ನಿರ್ದೇಶಕಿ ಡಾ.ಆರ್.ಎನ್.ಸರಿತಾ, ಆರೋಗ್ಯ ಶಿಕ್ಷಣ ಇಲಾಖೆಯ ಜತೆ ನಿರ್ದೇಶಕ ಡಾ.ಥಾಮಸ್ ಮ್ಯಾಥ್ಯೂ ಉಪಸ್ಥಿತರಿದ್ದರು. ಆರೋಗ್ಯ ಇಲಾಖೆ ಕಾರ್ಯದರ್ಶಿ ಡಾ.ರಾಜನ್ ಖೋಬ್ರಗಡೆ ಸ್ವಾಗತಿಸಿದರು. ಎನ್.ಎಚ್.ಎಂ.ಮಿಷನ್ ನಿರ್ದೇಶಕ ಡಾ.ರತನ್ ಖೇಲ್ಕರ್ ವರದಿ ವಾಚಿಸಿದರು. ಸ್ಥಳೀಯ ಮಟ್ಟದಲ್ಲೂ ಈ ಸಂಬಂಧ ಸಮಾರಂಭಗಳು ಜರುಗಿದ್ದು, ಸಂಬಂಧಪಟ್ಟವರು ಭಾಗವಹಿಸಿದರು.