ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 68 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. 66 ಮಂದಿಗೆ ಸಂಪರ್ಕದ ಮೂಲಕ ರೋಗ ಬಾ„ಸಿದೆ. ಇಬ್ಬರು ಇತರ ರಾಜ್ಯಗಳಿಂದ ಬಂದವರು. ರೋಗ ಬಾಧಿತರಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತರಾಗಿದ್ದಾರೆ. 58 ಮಂದಿ ಗುಣಮುಖರಾಗಿದ್ದಾರೆ.
ಕಳ್ಳಾರು-1, ಮೀಂಜ-1, ಅಜಾನೂರು-5, ಕಾಂಞಂಗಾಡ್-3, ಪಳ್ಳಿಕೆರೆ-3, ಕಾಸರಗೋಡು-8, ಮಧೂರು-2, ಚೆಮ್ನಾಡ್-1, ಪುತ್ತಿಗೆ-1, ಪಿಲಿಕ್ಕೋಡು-1, ಮಂಜೇಶ್ವರ-2, ಉದುಮ-27, ತೃಕ್ಕರಿಪುರ-6, ಪಡನ್ನ-1, ಕೋಡೋಂ-ಬೇಳೂರು-4, ಮುಳಿಯಾರು-1, ಪುಲ್ಲೂರು ಪೆರಿಯ-1 ಎಂಬಂತೆ ರೋಗ ಬಾಧಿಸಿದೆ.
ಜಿಲ್ಲೆಯಲ್ಲಿ ಇಬ್ಬರು ನಿಧನ ಹೊಂದಿದರು. 53 ವರ್ಷದ ಕಾಸರಗೋಡು ಚಾಲಿಂಗಲ್ ನಿವಾಸಿ ಹಾಗು 67 ವರ್ಷದ ಕಾಸರಗೋಡು ನಿವಾಸಿ ಕೊರೊನಾ ವೈರಸ್ ಸೋಂಕಿನಿಂದ ಸಾವಿಗೀಡಾದರು.
ಸೋಂಕು ಮೂಲ ಪತ್ತೆಯಾಗದವರು
ಮಂಜೇಶ್ವರ ಪಂಚಾಯತ್ ನ 44 ವರ್ಷದ ಪುರುಷನ ಸಂಪರ್ಕ ಮೂಲ ಪತ್ತೆಯಾಗಿಲ್ಲ.
ಇತರ ರಾಜ್ಯಗಳಿಂದ ಆಗಮಿಸಿದವರು:
ಕರ್ನಾಟಕದಿಂದ ಬಂದ ಕಾಸರಗೋಡು ನಗರಸಭೆಯ 27 ವರ್ಷದ, ಮಹಾರಾಷ್ಟ್ರದಿಂದ ಆಗಮಿಸಿದ ಪುತ್ತಿಗೆ ಪಂಚಾಯತ್ನ 22 ವರ್ಷದ ಯುವಕರಿಗೆ ಸೋಂಕು ಖಚಿತವಾಗಿದೆ.
58 ಮಂದಿಗೆ ಕೋವಿಡ್ ನೆಗೆಟಿವ್
ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 58 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಕಾಸರಗೋಡು ನಗರಸಭೆ ವ್ಯಾಪ್ತಿಯ 16, ಚೆಂಗಳ ಪಂಚಾಯತ್ 7, ಮಧೂರು ಪಂಚಾಯತ್ ನ 6, ಕಾರಡ್ಕ ಪಂಚಾಯತ್ ನ 4, ಬೆಳ್ಳೂರು ಪಂಚಾಯತ್ 3, ಕುಂಬಡಾಜೆ ಪಂಚಾಯತ್ 2, ಮುಳಿಯಾರು ಪಂಚಾಯತ್ 1, ಚೆಮ್ನಾಡ್ ಪಂಚಾಯತ್ 1, ನೀಲೇಶ್ವರ ನಗರಸಭೆ 2, ಕಾಞಂಗಾಡ್ ನಗರಸಭೆ 1, ತ್ರಿಕರಿಪುರ ಪಂಚಾಯತ್ 5, ಪಡನ್ನ ಪಂಚಾಯತ್ 4, ಉದುಮಾ ಪಂಚಾಯತ್ 3 ಮಂದಿ ಗುಣಮುಖರಾದವರು.
4988 ಮಂದಿ ನಿಗಾದಲ್ಲಿ
ಕಾಸರಗೋಡು ಜಿಲ್ಲೆಯಲ್ಲಿ 4988 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆಯ ವರದಿ ತಿಳಿಸಿದೆ.
3583 ಮಂದಿ ಮನೆಗಳಲ್ಲಿ, ಸಾಂಸ್ಥಿಕವಾಗಿ 1405 ಮಂದಿ ನಿಗಾದಲ್ಲಿರುವರು. ನೂತನವಾಗಿ 336 ಮಂದಿ ನಿಗಾ ಪ್ರವೇಶ ಮಾಡಿದ್ದಾರೆ. 192 ಮಂದಿ ಬುಧವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ನೂತನವಾಗಿ 974 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 1137 ಮಂದಿಯ ಫಲಿತಾಂಶ ಲಭಿಸಿಲ್ಲ.
ಮಾಸ್ಕ್ ಧರಿಸದ 372 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಪ್ರಕರಣಕ್ಕೆ ಸಂಬಂ„ಸಿ ಕಾಸರಗೋಡು ಜಿಲ್ಲೆಯಲ್ಲಿ 372 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ವರೆಗೆ ಕಾಸರಗೋಡು ಜಿಲ್ಲೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ದಾಖಲಾದ ಕೇಸುಗಳ ಸಂಖ್ಯೆ 20285 ಆಗಿದೆ.
ಲಾಕ್‍ಡೌನ್ ಉಲ್ಲಂಘನೆ : 4 ಕೇಸು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ 4 ಕೇಸುಗಳನ್ನು ದಾಖಲಿಸಲಾಗಿದೆ. 4 ಮಂದಿಯನ್ನು ಬಂಧಿಸಲಾಗಿದೆ. ಕಾಸರಗೋಡು ನಗರಠಾಣೆಯಲ್ಲಿ 1 ಕೇಸು, ವಿದ್ಯಾನಗರ 1, ಮೇಲ್ಪರಂಬ 1, ಚಂದೇರ 1 ಕೇಸುಗಳನ್ನು ದಾಖಲಿಸಲಾಗಿದೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 3370 ಆಗಿದೆ. 4536 ಮಂದಿಯನ್ನು ಬಂಧಿಸಲಾಗಿದ್ದು, 1321 ವಾಹನಗಳನ್ನು ವಶಪಡಿಸಲಾಗಿದೆ.