ಬೀಜಿಂಗ್: ಮಹಾಮಾರಿ ಕೊರೋನಾ ವೈರಸ್ ಈಗಾಗಲೇ ಜಗತ್ತನ್ನೇ ನಡುಗಿಸಿದ್ದು, ಸರಿ ಸುಮಾರು 7 ಲಕ್ಷ ಮಂದಿಯನ್ನು ಬಲಿ ಪಡೆದಿದೆ. ಇದರ ಮಧ್ಯೆ ಚೀನಾದಲ್ಲಿ ಇದೀಗ ಮತ್ತೊಂದು ಮಾರಣಾಂತಿಕ ವೈರಸ್ ಕಾಣಿಸಿಕೊಂಡಿದ್ದು ಅದಾಗಲೇ 7 ಮಂದಿಯನ್ನು ಬಲಿ ಪಡೆದಿದ್ದು 60 ಮಂದಿ ಸೋಂಕಿಗೆ ತುತ್ತಾಗಿದ್ದಾರೆ.
ಜಿಯಾಂಗ್ಸು ಮತ್ತು ಅನ್ಹುಯಿ ಪ್ರಾಂತ್ಯಗಳಲ್ಲಿ ಈಗಾಗಲೇ ಈ ವೈರಸ್ ನಿಂದ 7 ಮಂದಿ ಬಲಿಯಾಗಿದ್ದು 60 ಮಂದಿ ಸೋಂಕಿಗೆ ತುತ್ತಾಗಿದ್ದಾರೆ ಎಂದು ಚೀನಾದ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ವರದಿ ಮಡಿದೆ. ಈ ವೈರಸ್ ಗೆ ಎಸ್‍ಎಫ್‍ಟಿಎಸ್‍ವಿ(ಸೀವಿಯರ್ ಫೀವರ್ ವಿಥ್ ಥ್ರೋಂಬೊ ಬೊಕ್ಯಾಟೋಪಿನಿಯಾ ಸಿಂಡ್ರೋಮ್ ಬುನಿವೈರಸ್) ಎಂದು ಹೆಸರಿಸಲಾಗಿದೆ. ಈ ವೈರಸ್ ಕೀಟಗಳ ಕಡಿತದ ಮೂಲಕ ಮನುಷ್ಯರಿಗೆ ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ವೈರಸ್ ಸಹ ಮಾರಣಾಂತಿಕ ಮಟ್ಟದಲ್ಲಿ ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.