ಕಾಸರಗೋಡು: ಕಾಸರಗೋಡು ಸಹಿತ ರಾಜ್ಯದ 7 ಜಿಲ್ಲೆಗಳಲ್ಲಿ ರೆಡ್ ಅಲೆರ್ಟ್ ಘೋಷಣೆ ಮಾಡಲಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಈ ಪ್ರದೇಶಗಳಲ್ಲಿ ಅತಿ ಬಿರುಸಿನ ಮಳೆ ಸುರಿಯುವ ಸಾಧ್ಯತೆಯಿದ್ದು, ಜನ ಜಾಗರೂಕತೆ ಪಾಲಿಸುವಂತೆ ಎಚ್ಚರಿಕೆ ನೀಡಲಾಗಿದೆ.
ಕಾಸರಗೋಡು ಸಹಿತ ಕಣ್ಣೂರು, ಆಲಪ್ಪುಳ, ಕೋಯಿಕೋಡ್, ವಯನಾಡ್, ಮಲಪ್ಪುರಂ, ಇಡುಕ್ಕಿ ಜಿಲ್ಲೆಗಳಲ್ಲಿ ರೆಡ್ ಅಲೆರ್ಟ್ ಘೋಷಿಸಲಾಗಿದೆ. ಉಳಿದ ಕೆಲವು ಜಿಲ್ಲೆಗಳಲ್ಲಿ ಆರೆಂಜ್ ಅಲೆರ್ಟ್ ಘೋಷಣೆಗೊಂಡಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಸಾರ್ವಜನಿಕರು ಅತೀವ ಜಾಗ್ರತೆ ಪಾಲಿಸಬೇಕು, ಸರಕಾರಿ ವ್ಯವಸ್ಥೆಗಳು ಮುಂಜಾಗರೂಕತೆ, ಸಂರಕ್ಷಣೆ ಇತ್ಯಾದಿಗಳಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಬೇಕು ಎಂದು ರಾಜ್ಯ ದುರಂತ ನಿವಾರಣೆ ಪ್ರಾಧಿಕಾರ ಸಲಹೆ ಮಾಡಿದೆ.