ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 73 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 70 ಮಂದಿಗೆ ಸಂಪರ್ಕದಿಂದ ಸೋಂಕು ಹರಡಿದ್ದು, ಇದರಲ್ಲಿ 6 ಮಂದಿಯ ಸಂಪರ್ಕ ಮೂಲ ಪತ್ತೆಯಾಗಿಲ್ಲ. ಇತರ ರಾಜ್ಯಗಳಿಂದ ಬಂದಿದ್ದ ಮೂವರಿಗೆ ಸೋಂಕು ಖಚಿತವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿರುವರು.
ಕಾಸರಗೋಡು ಜಿಲ್ಲೆಯಲ್ಲಿ 33 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಜಿಲ್ಲೆಯಲ್ಲಿ 4504 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3128 ಮಂದಿ, ಸಾಂಸ್ಥಿಕವಾಗಿ 1376 ಮಂದಿ ನಿಗಾದಲ್ಲಿರುವರು. ನೂತನವಾಗಿ 349 ಮಂದಿ ನಿಗಾ ಪ್ರವೇಶ ಮಾಡಿದ್ದಾರೆ. 267 ಮಂದಿ ಶನಿವಾರ ತಮ್ಮ ನಿಗಾ ಅವ„ ಪೂರ್ಣಗೊಳಿಸಿದ್ದಾರೆ.
ನೂತನವಾಗಿ 536 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 1212 ಮಂದಿಯ ಫಲಿತಾಂಶ ಲಭಿಸಿಲ್ಲ.
ಸವಿವರ:
ಕೋವಿಡ್ ಜಿಲ್ಲೆಯಲ್ಲಿ ಇನ್ನೂ 73 ಜನರಿದ್ದಾರೆ
ಜಿಲ್ಲೆಯಲ್ಲಿ ಕ್ವಾರಂಟೈನ್ ನಲ್ಲಿ ಇರುವ ಒಟ್ಟು ಸಂಖ್ಯೆ 4504, ಇದರಲ್ಲಿ ಮನೆಗಳಲ್ಲಿ 3128 ಮತ್ತು ವಿವಿಧ ಕೇಂದ್ರಗಳಲ್ಲಿ 1376 ಮಂದಿ ಇದ್ದಾರೆ. ಹೊಸದಾಗಿ ಸೇರಿಸಲಾದ 349 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಸೆಂಟಿನೆಲ್ ಸಮೀಕ್ಷೆ ಸೇರಿದಂತೆ ಒಟ್ಟು 536 ಹೊಸ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 1212 ಜನರ ಪರೀಕ್ಷಾ ಫಲಿತಾಂಶಗಳನ್ನು ಇನ್ನೂ ಪಡೆಯಬೇಕಾದೆ. 267 ನಿರೀಕ್ಷಣಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಒಟ್ಟು 349 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಮೂವತ್ತಮೂರು ಜನರನ್ನು ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಂದ ಬಿಡುಗಡೆ ಮಾಡಲಾಗಿದೆ.
ಸೋಂಕಿನ ಮೂಲ ತಿಳಿಯದ ಬಾಧಿತರು:
ಮಂಜೇಶ್ವರಂ ಪಂಚಾಯತ್ ಮೂಲದ 65 ವರ್ಷದ ಮತ್ತು 62 ವರ್ಷದ ವ್ಯಕ್ತಿಗಳು, ಕಾಸರಗೋಡು ಪುರಸಭೆಯ 38 ವರ್ಷದ ಮತ್ತು 45 ವರ್ಷದ, ಪಳ್ಳಿಕ್ಕರ ಪಂಚಾಯತ್‍ನಿಂದ 31 ವರ್ಷದ ವ್ಯಕ್ತಿ, ತ್ರಿಕ್ಕರಿಪುರ ಪಂಚಾಯತ್ ನಿಂದ 44 ವರ್ಷ ವ್ಯಕ್ತಿಗಳಿಗೆ ಹೇಗೆ ಸೋಂಕು ಬಂದಿತೆಂಬುದು ತಿಳಿದುಬಂದಿಲ್ಲ.
ಸಂಪರ್ಕ ಮೂಲಕ ಸೋಂಕು ಬಾಧಿತರಾದವರು:
ಮಂಜೇಶ್ವರಂ ಪಂಚಾಯತ್‍ನಿಂದ 32 ವರ್ಷ ವ್ಯಕ್ತಿ, ಚೆಮ್ಮನಾಡ್ ಪಂಚಾಯತ್‍ನ 45, 23 ಮತ್ತು 28, 37 ವರ್ಷ (ಆರೋಗ್ಯ ಕಾರ್ಯಕರ್ತ) ಪುರುಷರು, ಮಂಗಲ್ಪಾಡಿ ಪಂಚಾಯತ್‍ನಲ್ಲಿ 41, 22,55 ವರ್ಷ ವಯಸ್ಸಿನ ಪುರುಷರು ಮತ್ತು 38 ಮತ್ತು 45 ವರ್ಷದ ಮಹಿಳೆಯರು, ಮೇಲ್ಪರಂಬ ಪಂಚಾಯತ್‍ನಿಂದ 35 ವರ್ಷ, ಪನತ್ತಡಿ ಪಂಚಾಯತ್‍ನಿಂದ 32 ವರ್ಷ, ಅಜನೂರ್ ಪಂಚಾಯತ್‍ನಲ್ಲಿ 47 ಮತ್ತು 49 ವರ್ಷದ ಪುರುಷರು, 28, 13 ಮತ್ತು 12 ವರ್ಷದ ಬಾಲಕಿಯರು, ಕೋಡೋಂಬೆಳ್ಳೂರು ಪಂಚಾಯತ್ ಮೂಲದ 69 ವರ್ಷದ, ಕಾಞಂಗಾಡ್ ಪುರಸಭೆಯಲ್ಲಿ 23 ಮತ್ತು 27 ವರ್ಷದ ಪುರುಷರು ಮತ್ತು 50 ಮತ್ತು 27 ವರ್ಷದ ಮಹಿಳೆಯರು, ಮಡಿಕ್ಕೈ ಪಂಚಾಯತ್‍ನಿಂದ 39 ವರ್ಷ, ಪಳ್ಳಿಕ್ಕೆರೆ ಪಂಚಾಯತ್‍ನಿಂದ 29 ವರ್ಷ, ಕುಂಬಳೆ ಪಂಚಾಯತ್‍ನ 40 ವರ್ಷದ, 32 ವರ್ಷದ, 4 ವರ್ಷದ ಹುಡುಗಿ, 9- ಮತ್ತು 11 ವರ್ಷದ ಬಾಲಕರು,
ಕಾಸರಗೋಡು ಪುರಸಭೆಯಲ್ಲಿ 39, 42, 43, 45, 80, 39, 36, 34, 26, 23 ವರ್ಷ ವಯಸ್ಸಿನ ಪುರುಷರು, ಆರೋಗ್ಯ ಕಾರ್ಯಕರ್ತರು 31, 34 ವರ್ಷ ಮಹಿಳೆಯರು, 35, 26, 20 ವರ್ಷ ವಯಸ್ಸಿನ ಮಹಿಳೆಯರು, ಚೆಂಗಳ ಪಂಚಾಯತ್‍ನಿಂದ 44 ವರ್ಷ, ಮೊಗ್ರಾಲ್ ಪುತ್ತೂರು ಪಂಚಾಯತ್ ಮೂಲದ 29 ವರ್ಷದ, ಮಧೂರು ಪಂಚಾಯತ್ ಮೂಲದ 45 ವರ್ಷದ, ನೀಲೇಶ್ವರಂ ಪುರಸಭೆಯ 27, 21, 58 ಮತ್ತು 49, 42 ವರ್ಷದ ಪುರುಷರು, ತ್ರಿಕ್ಕರಿಪುರ ಪಂಚಾಯತ್‍ನ ಪುರುಷರು 31, 25, 50, 17, 27 ವರ್ಷ, 39 ವರ್ಷದ ಆರೋಗ್ಯ ಕಾರ್ಯಕರ್ತ, ಮಹಿಳೆಯರು 70, 65 ವರ್ಷ ಮತ್ತು 7 ವರ್ಷದ ಬಾಲಕಿ, ಉದುಮಾ ಪಂಚಾಯತ್ ಮೂಲದ 32 ವರ್ಷದ, ಕಣ್ಣೂರು ಮೂಲದ 48 ವರ್ಷ ವ್ಯಕ್ತಿಗಳಿಗೆ ಸಂಪರ್ಕ ಮೂಲಕ ಕೋವಿಡ್ ಬಾಧಿಸಿದೆ.
ಬೇರೆ ರಾಜ್ಯದವರು:
ಪುಲ್ಲೂರ್ ಪೆರಿಯಾ ಪಂಚಾಯತ್ ಮೂಲದ 39 ವರ್ಷದ (ತಮಿಳುನಾಡು), 22 ವರ್ಷದ (ಕರ್ನಾಟಕ), ಚೆಮ್ಮನಾಡ್ ಪಂಚಾಯತ್ (ಕರ್ನಾಟಕ) ದಿಂದ 52 ವರ್ಷ.
ಪಂಚಾಯತಿ ಮಟ್ಟದ ಬಾಧಿತರ ವಿವರ:
ತ್ರಿಕ್ಕರಿಪುರ - 10
ಕಾಸರಗೋಡು-17
ಉದುಮಾ-ಒಂದು
ಚೆಮ್ಮನಾಡ್ - ಐದು
ವಲಿಯಪರಂಬ -ಒಂದು
ಮಂಗಲ್ಪಾಡಿ -ಐದು
ಮಂಜೇಶ್ವರ- ಮೂರು
ಅಜನೂರು- ಐದು
ಕೋಡೋಂ ಬೆಳ್ಳೂರು-ಒಂದು
ಕಾಞಂಗಾಡ್- ನಾಲ್ಕು
ಪಳ್ಳಿಕ್ಕೆರೆ- ಎರಡು
ಕುಂಬಳೆ-ಐದು
ಚೆಂಗಳ -ಒಂದು
ಮೊಗ್ರಾಲ್ ಪುತ್ತೂರು-ಒಂದು
ಮಧೂರು -ಒಂದು
ನೀಲೇಶ್ವರ- ಐದು
ಪುಲ್ಲೂರ್ ಪೆರಿಯಾ-ಎರಡು
ಕಂಕೋಲ್ (ಕಣ್ಣೂರು) -ಒಂದು
ಜಿಲ್ಲೆಯಲ್ಲಿ ಈವರೆಗೆ 2588 ಜನರಿಗೆ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ 2588 ಕೋವಿಡ್ ರೋಗದ ಪ್ರಕರಣಗಳು ಮೂರು ಹಂತಗಳಲ್ಲಿ ದೃಢಪಟ್ಟಿದೆ. 1476 ಬಾಧಿತರನ್ನು ಈವರೆಗೆ ಗುಣಪಡಿಸಲಾಗಿದೆ. ಪ್ರಸ್ತುತ 1103 ಮಂದಿ ಚಿಕಿತ್ಸೆ ಹಂತದಲ್ಲಿದ್ದಾರೆ.
ಇಂದಿನ ಸೋಂಕು ಪೀಡಿತ ವರದಿಯಲ್ಲಿ ಮೂವರು ಮಕ್ಕಳು ಸೇರಿದ್ದಾರೆ. ಅವರು ಕುಂಬಳೆ ಗ್ರಾಮ ಪಂಚಾಯಿತಿಯ 4 ವರ್ಷದ ಬಾಲಕಿ, 9 ವರ್ಷದ ಬಾಲಕ ಮತ್ತು ತ್ರಿಕ್ಕರಿಪುರ ಗ್ರಾಮ ಪಂಚಾಯತ್‍ನ 7 ವರ್ಷದ ಬಾಲಕಿ.
ಮಾಸ್ಕ್ ಧರಿಸದ 404 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಪ್ರಕರಣಕ್ಕೆ ಸಂಬಂ„ಸಿ ಕಾಸರಗೋಡು ಜಿಲ್ಲೆಯಲ್ಲಿ 404 ಮಂದಿ ವಿರುದ್ಧ ಕೇಸು ದಾಖಲಾಗಿದೆ. ಈ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ ದಾಖಲಾದ ಕೇಸುಗಳ ಸಂಖ್ಯೆ 18984 ಆಗಿದೆ.
ಲಾಕ್‍ಡೌನ್ ಉಲ್ಲಂಘನೆ: 2 ಕೇಸು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ ಆ.7ರಂದು ಹೊಸದುರ್ಗ ಪೆÇಲೀಸ್ ಠಾಣೆಯಲ್ಲಿ 2 ಕೇಸುಗಳು ದಾಖಲಾಗಿವೆ. ಈ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ದಾಖಲಾದ ಕೇಸುಗಳ ಸಂಖ್ಯೆ 3354 ಆಗಿದೆ. 4509 ಮಂದಿಯನ್ನು ಬಂಧಿಸಲಾಗಿದೆ. 1319 ವಾಹನಗಳನ್ನು ವಶಪಡಿಸಲಾಗಿದೆ.