ನವದೆಹಲಿ: 74ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ನಡುವೆಯೇ ಭಾರತೀಯ ಸೇನೆಯಲ್ಲಿ ವಿವಿಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸೇನೆಯ ಶ್ವಾನದಳದ ವಿಡಾ ಮತ್ತು ಸೋಫಿ ನಾಯಿಗಳಿಗೆ ಅಭಿನಂದನೆ ಸಲ್ಲಿಕೆ ಮಾಡಲಾಗಿದೆ.
ವಿವಿಧ ಕಾರ್ಯಾಚರಣೆಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ವಿಡಾ ಮತ್ತು ಸೋಫಿ ಶ್ವಾನಗಳು ಭಾರತೀಯ ಸೇನೆಯ ಅಭಿನಂದನೆಗೆ ಪಾತ್ರವಾಗಿದ್ದು, ಅಭಿನಂದನಾ ಕಾರ್ಡ್ ನೀಡಿ ಗೌರವಿಸಲಾಗಿದೆ.
ಈ ವರ್ಷದಲ್ಲಿ ಈ ಎರಡು ಶ್ವಾನಗಳು ವಿವಿಧ ಕಾರ್ಯಾಚರಣೆಗಳಲ್ಲಿ ಅನನ್ಯವಾದ ಪಾತ್ರವನ್ನು ನಿರ್ವಹಿಸಿದ್ದವು. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಗೌರವಿಸಿದೆ ಎಂದು ತಿಳಿದುಬಂದಿದೆ.
Indian Army dogs Vida and Sophie awarded the Chief of Army Staff 'Commendation Cards' on #IndependenceDay this year, for their role in different operations.