ಮಂಜೇಶ್ವರ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮಂಜೇಶ್ವರ ಘಟಕದ ವತಿಯಿಂದ 74 ನೇ ಸ್ವಾತಂತ್ರೋತ್ಸವದಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಕಚೇರಿಯ ಮುಂಭಾಗದಲ್ಲಿ ನಡೆಯಿತು.
ಘಟಕದ ಅಧ್ಯಕ್ಷ ಬಶೀರ್ ಕನಿಲ ಧ್ವಜಾರೋಹಣಗೈದರು. ಘಟಕದ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಗೇರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭ ಘಟಕದ ಕೋಶಾಧಿಕಾರಿ ಹಸೈನಾರ್ ಯು, ಮಚೆರ್ಂಟ್ ವೆಲ್ಫೇರ್ ಸೊಸೈಟಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ಕೆ. ನಾರಾಯಣ ಕನಿಲ, ಅಬ್ದುಲ್ ಹಮೀದ್, ಸದ್ಯೋಜಾತ ಆಚಾರ್ಯ ಉದ್ಯಾವರ, ಕುಮುದಾ ಮಂಜೇಶ್ವರ, ಪತ್ರಕರ್ತರಾದ ಅರಿಫ್ ಮಚಂಪಾಡಿ, ರತನ್ ಕುಮಾರ್ ಹೊಸಂಗಡಿ, ಹಾಗೂ ವ್ಯಾಪಾರಿ ಬಂಧುಗಳು ಉಪಸ್ಥಿತರಿದ್ದರು. ಕೋವಿಡ್ ಮಾನದಂಡಗಳ ಅನುಸಾರ ಕಾರ್ಯಕ್ರಮವನ್ನು ಆಯೋಜನೆಗೊಂಡಿತ್ತು.