ಕುಂಬಳೆ: ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಶಿಕ್ಷಕವೃಂದ ಹಾಗೂ ಶಾಲಾ ಆಡಳಿತ ಮಂಡಳಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
ಆಡಳಿತ ಸಮಿತಿ ಅಧ್ಯಕ್ಷ ಎಸ್.ಎನ್. ರಾವ್ ಮುನ್ನಿಪ್ಪಾಡಿ ಧ್ವಜಾರೋಹಣಗೈದರು. ಈಸಂದರ್ಭ ಮಾತನಾಡಿದ ಅವರು ಮಹಾತ್ಮಾಗಾಂಧೀಜಿ ಸಹಿತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನೇತಾರರನ್ನು ನಾವು ಅನುಗಾಲವೂ ಸ್ಮರಿಸಬೇಕಾಗಿದೆ. ದೇಶದಲ್ಲೆಡೆ ತಲೆದೋರಿದ ಕೊರೋನಾ ಸೋಂಕಿನ ನಿವಾರಣೆ ಹಾಗೂ ಈ ವಿದ್ಯಾ ದೇಗುಲದ ಅಭಿವೃದ್ಧಿಗೆ ಶ್ರೀ ಗುರುದೇವತಾನುಗ್ರಹ ಇರಲಿ ಎಂದರು.
ಕ್ಷಕ-ಶಿಕ್ಷಕ ಸಮಿತಿ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆಮಾರ್ಗ, ಮುಖ್ಯ ಶಿಕ್ಷಕಿ ಚಿತ್ರಾಸರಸ್ವತಿ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.