ಮಂಜೇಶ್ವರ: ಚಕ್ರವರ್ತಿ ಹೊಸಂಗಡಿ ಇದರ ವತಿಯಿಂದ 74 ನೇ ಸ್ವಾತಂತ್ರೋತ್ಸವವನ್ನ ಅಂಗಡಿಪದವಿನಲ್ಲಿ ಸಂಸ್ಥೆಯ ಅಧ್ಯಕ್ಷ ದಿನೇಶ್ ಅಂಗಡಿಪದವು ಧ್ವಜಾರೋಹಣಗೈಯುವ ಮೂಲಕ ಚಾಲನೆ ನೀಡಿದರು.
ಸಂಸ್ಥೆಯ ಪಧಾಧಿಕಾರಿಗಳಾದ ಸತೀಶ್ ಕನಿಲ, ಸುರೇಶ್ ಗಾನಿಂಜಾಲ್, ಪ್ರದೀಪ್, ರತನ್ ಕುಮಾರ್ ಹೊಸಂಗಡಿ, ದೀಪಕ್ ರಾಜ್ ಉಪ್ಪಳ, ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸತೀಶ್ ಕನಿಲ ಸ್ವಾಗತಿಸಿ, ಪತ್ರಕರ್ತ ರತನ್ ಕುಮಾರ್ ಹೊಸಂಗಡಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಕೋಶಾಧಿಕಾರಿ ಸುರೇಶ್ ಗಾನಿಂಜಾಲ್ ವಂದಿಸಿದರು. ಕೋವಿಡ್ ನಿಯಮಾನುಸಾರ ಸರಳವಾಗಿ ಕಾರ್ಯಕ್ರಮವನ್ನು ಆಚರಿಸಲಾಯಿತು.