ಸ್ವಾತಂತ್ರ್ಯ ದಿನಾಚರಣೆ ಬಂದರೆ ಸಾಕು ಚಿತ್ರರಂಗದ ಗಣ್ಯರು ಸಹ ವಿಶೇಷವಾಗಿ ಆಚರಣೆ ಮಾಡುತ್ತಾರೆ. ಚಿತ್ರರಂಗದ ಸಾಕಷ್ಟು ಗಣ್ಯರು ದೇಶಪ್ರೇಮ ಮೆರೆಯುವ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಅದರಲ್ಲೂ ಬಾಲಿವುಡ್ ನಲ್ಲಿ ದೇಶ ಭಕ್ತಿಯ ಅನೇಕ ಸಿನಿಮಾಗಳು ನಿರ್ಮಾಣವಾಗಿವೆ.
ಸ್ವಾತಂತ್ರ್ಯ ಸಂಗ್ರಾಮದ ಕುರಿತ ಐತಿಹಾಸಿ ಸಿನಿಮಾಗಳು, ಹೋರಾಟಗಾರರ ಬಗ್ಗೆ, ಸ್ವಾತಂತ್ರ್ಯದ ನಂತರದ ಕಥೆ ಸೇರಿದ್ದಂತೆ ದೇಶ ಭಕ್ತಿ ಮೆರೆಯುವ ಸಾಕಷ್ಟು ಸಿನಿಮಾಗಳು ರಿಲೀಸ್ ಆಗಿವೆ. ಬಾಲಿವುಡ್ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲಿಯೂ ದೇಶ ಪ್ರೇಮದ ಸಿನಿಮಾಗಳು ತೆರೆಕಂಡಿವೆ. ಕನ್ನಡದಲ್ಲಿಯೂ ದರ್ಶನ್ ಅಭಿನಯದ ಸಂಗೊಳ್ಳಿ ರಾಯಣ್ಣ ಸಿನಿಮಾ ಮಾಡಿ ಯಶಸ್ಸು ಕಂಡಿದ್ದಾರೆ.
ಇನ್ನೂ ಹಿಂದಿಯಲ್ಲಿ ಇತ್ತೀಚಿಗೆ ಬಂದ ಉರಿ, ರಾಜಿ, ಪರಮಾಣು ಸಿನಿಮಾಗಳು ಸೇರಿದ್ದಂತೆ ಎವರ್ ಗ್ರೀನ್ ಸಿನಿಮಾಗಳಾದ ಲಗಾನ್ ಬಾರ್ಡರ್ ಕಾರ್ಗಿಲ್, ರಂಗ್ ದೇ ಬಸಂತಿ, ರೋಜಾ ಚಿತ್ರಗಳು ಹೆಮ್ಮೆಯ ಭಾರತೀಯರನ್ನಾಗಿಸುತ್ತೆ. ಆಮೀರ್ ಖಾನ್. ಅಕ್ಷಯ್ ಕುಮಾರ್, ಖಾರುಖ್ ಖಾನ್, ಅಜಯ್ ದೇವಗನ್ ಮತ್ತು ಹೃತಿಕ್ ರೋಷನ್ ಮುಂತಾದವರು ದೇಶಪ್ರೇಮದ ಸಿನಿಮಾಗಳನ್ನು ಮಾಡಿಗೆದ್ದಿದ್ದಾರೆ. ಹೆಮ್ಮೆಯ ಭಾರತೀಯರನ್ನಾಗಿ ಮಾಡುವ ದೇಶಪ್ರೇಮದ ಸಿನಿಮಾಗಳು ಇಲ್ಲಿವೆ. ಮುಂದೆ ಓದಿ..
ರಾಝಿ ಸಿನಿಮಾ: ಬಾಲಿವುಡ್ ನಟಿ ಅಲಿಯಾ ಭಟ್ ಮತ್ತು ವಿಕ್ಕಿ ಕೌಸಲ್ ಅಭಿನಯದ ರಾಜಿ ಸಿನಿಮಾ ಸ್ಪೈ ಥ್ರಿಲ್ಲರ್ ಸಿನಿಮಾವಾಗಿದೆ. ಹರಿಂದರ್ ಸಿಕ್ ಎನ್ನುವವರು ಬರೆದ ಸೆಹ್ಮತ್ ಕಾದಂಬರಿ ಆಧಾರಿತ ಸಿನಿಮಾವಿದು. 1971ರ ಇಂಡೋ-ಪಾಕಿಸ್ತಾನ್ ಯುದ್ಧಕ್ಕೆ ಮುಂಚಿತವಾಗಿ, ಭಾರತಕ್ಕೆ ಮಾಹಿತಿ ಪ್ರಸಾರ ಮಾಡಲು ತಂದೆಯ ಕೋರಿಕೆಯ ಮೇರೆಗೆ ಪಾಕಿಸ್ತಾನದ ಮಿಲಿಟರಿ ಅಧಿಕಾರಿಯನ್ನು ಮದುವೆಯಾಗಿ ಭಾರತಕ್ಕೆ ಮಾಹಿತಿಯನ್ನು ಪ್ರಸಾರ ಮಾಡುವ ಕಥೆ ಈ ಸಿನಿಮಾದಲ್ಲಿದೆ. ರಾಜಿ ಬಾಕ್ಸ್ ಆಫೀಸ್ ನಲ್ಲಿಯೂ ಉತ್ತಮ ಕಲೆಕ್ಷನ್ ಮಾಡಿದೆ.ಬಾರ್ಡರ್ ಸಿನಿಮಾ: ಜೆ ಪಿ ದತ್ತಾ ಅವರ ಅಪ್ರತಿಮ ಸೃಷ್ಟಿ ಬಾರ್ಡರ್. ನೋಡಲೆ ಬೇಕಾದ ಸಿನಿಮಾಗಳಲ್ಲಿ ಒಂದು. ಸನ್ನಿ ಡಿಯೋಲ್, ಸುನಿಲ್ ಶೆಟ್ಟಿ, ಮತ್ತು ಅಕ್ಷಯ್ ಖನ್ನಾ ಅಭಿನಯದ ಸಿನಿಮಾ. 1971ರ ಭಾರತ-ಪಾಕಿಸ್ತಾನ ಯುದ್ಧದ ಸುತ್ತ ಹೆಣೆಯಲಾದ ಕಥೆ. ಬಾರ್ಡರ್ ಸಿನಿಮಾ ಸಂಗೀತ ಭರಿತವಾಗಿಯೂ ಯಶಸ್ವಿಯಾಗಿದೆ. ಲಗಾನ್ ಬ್ರಿಟಿಷರು ಆಡುತ್ತಿದ್ದ ಕ್ರಿಕೆಟ್ ಆಟದ ಮೂಲಕವೇ ಅವರನ್ನು ಸೋಲಿಸಿ ಸುಂಕ ತಪ್ಪಿಸಲು ಹಳ್ಳಿ ಹೈದ ಭುವನ್ ಹಾಗೂ ಅವನ ತಂಡ ಪಂದ್ಯ ಕಟ್ಟುವ ಕಥೆ ಇಲ್ಲಿದೆ. ಅಂತಿಮವಾಗಿ ಆಟದಲ್ಲಿ ಭಾರತ ತಂಡಕ್ಕೆ ಜಯ ಸಿಗುತ್ತದೆ. ಆಮೀರ್ ಖಾನ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.