ಮಧೂರು: ಮಧೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ನಡೆಸಲಾದ ಆಂಟಿಜೆನ್ ತಪಾಸಣೆಯಲ್ಲಿ 8 ಮಂದಿಗೆ ಕೋವಿಡ್ ಪಾಸಿಟಿವ್ ಆಗಿರುವುದು ಖಚಿತವಾಗಿದೆ.
ಇವರಲ್ಲಿ ಇಬ್ಬರು ಕಾಸರಗೋಡು ನಗರಸಭೆಯ ನಿವಾಸಿಗಳಾಗಿದ್ದಾರೆ. ಉಳಿಯತ್ತಡ್ಕ ಅಟಲ್ ಜಿ ಸಭಾಂಗಣದಲ್ಲಿ ಈ ತಪಾಸಣೆ ಜರಗಿದೆ. ಒಟ್ಟು 80 ಮಂದಿಯನ್ನು ತಪಾಸಣೆಗೊಳಪಡಿಸಲಾಗಿತ್ತು.
ಕಾಸರಗೋಡು ಜಿಲ್ಲೆಯಲ್ಲಿ ಸಾಮಾಜಿಕ ಸಂಪರ್ಕ ಮೂಲಕ ಕೋವಿಡ್ ಸೋಂಕು ಹೆಚ್ಚಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಪ್ರತಿರೋಧ ಚಟುವಟಿಕೆಗಳನ್ನು ಚುರುಕುಗೊಳಿಸಿದೆ. ಇದರ ಅಂಗವಾಗಿ ವಿವಿಧ ಸೋಂಕು ಬಾಧಿತ ಪ್ರದೇಶಗಳಲ್ಲಿ ನಡೆಸುತ್ತಿರುವ ತಪಾಸಣೆಗಳ ಅಂಗವಾಗಿ ಮಧೂರಿನಲ್ಲೂ ಆಂಟಿಜೆನ್ ತಪಾಸಣೆ ನಡೆಸಲಾಗಿದೆ.
ಮಧೂರು ಗ್ರಾಮಪಂಚಾಯತ್ ನಲ್ಲಿ ಈ ವರೆಗೆ ಒಟ್ಟು 96 ಕೋವಿಡ್ ಪಾಸಿಟಿವ್ ಕೇಸುಗಳು ಖಚಿತಗೊಂಡಿವೆ. 59 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಈಗ ಪಂಚಾಯತ್ ನ 2,3,6,7,9,10,11,14,16,17,18,19 ವಾರ್ಡ್ ಗಳನ್ನು ಹಾಟ್ ಸ್ಪಾಟ್ ಆಗಿ ಫೆÇೀಷಿಸಲಾಗಿದೆ.
ತಪಾಸಣೆ ಶಿಬಿರದಲ್ಲಿ ಡಾ.ಹರ್ಷ, ಕುಂಬಳೆ ಬ್ಲಾಕ್ ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಜ್ಯೂನಿಯರ್ ಹೆಲ್ತ್ ಇನ್ಸ್ ಪೆಕ್ಟರರಾದ ಷೌಕತ್, ಅರುಣ್, ಗೋಪಾಲಕೃಷ್ಣನ್, ಜ್ಯೂನಿಯರ್ ಪಬ್ಲಿಕ್ ಹೆಲ್ತ್ ದಾದಿಯರಾದ ಶೋಭಾ, ಅಂಬಿಳಿ, ಶಾಂತಾ, ಮಾಯಾ, ನಸಿರ್ಂಗ್ ಸಹಾಯಕಿ ವೇದಾವತಿ ಮೊದಲಾದವರು ನೇತೃತ್ವ ವಹಿಸಿದ್ದರು.