ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 81 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 74 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. ಇವರಲ್ಲಿ ಇಬ್ಬರ ಸಂಪರ್ಕ ಮೂಲ ಪತ್ತೆಯಾಗಿಲ್ಲ. 3 ಮಂದಿ ವಿದೇಶದಿಂದ, ಇಬ್ಬರು ಇತರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಕಾಸರಗೋಡು ನಗರಸಭೆ 9, ಮಂಜೇಶ್ವರ ಪಂಚಾಯತ್ 11, ವರ್ಕಾಡಿ ಪಂಚಾಯತ್ 11, ಕಾರಡ್ಕ ಪಂಚಾಯತ್ 3, ಚೆಮ್ನಾಡ್ ಪಂಚಾಯತ್ 7, ಮಂಗಲ್ಪಾಡಿ ಪಂಚಾಯತ್ 1, ಮೀಂಜ ಪಂಚಾಯತ್ 1, ಮಧೂರು ಪಂಚಾಯತ್ 1, ಚೆಂಗಳ ಪಂಚಾಯತ್ 1, ಕಾಂಞಂಗಾಡ್ ನಗರಸಭೆ 5, ಕೋಡೋಂ-ಬೇಳೂರು ಪಂಚಾಯತ್ 1, ಬೇಡಡ್ಕ ಪಂಚಾಯತ್ 1, ಪಳ್ಳಿಕ್ಕರೆ ಪಂಚಾಯತ್ 3, ಉದುಮ ಪಂಚಾಯತ್ 13, ಅಜಾನೂರು ಪಂಚಾಯತ್ 7, ಪುಲ್ಲೂರು-ಪೆರಿಯ ಪಂಚಾಯತ್ 1, ಕಳ್ಳಾರ್ ಪಂಚಾಯತ್ 1, ನೀಲೇಶ್ವರ ನಗರಸಭೆ 2, ಪಿಲಿಕೋಡ್ ಪಂಚಾಯತ್ 1, ಕುಂಬಳೆ 1 ಮಂದಿ ಸೋಂಕು ಬಾಧಿತರು.
4 ಮಂದಿಗೆ ಕೋವಿಡ್ ನೆಗೆಟಿವ್ : ಕಾಸರಗೋಡು ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 4 ಮಂದಿಗೆ ಶನಿವಾರ ಕೋವಿಡ್ ನೆಗೆಟಿವ್ ಆಗಿದೆ. ಚೆಮ್ನಾಡ್ ಪಂಚಾಯತ್‍ನ 2, ಪೈವಳಿಕೆ, ಕಿನಾನೂರು-ಕರಿಂದಳಂ ಪಂಚಾಯತ್‍ನ ತಲಾ 1 ಮಂದಿ ಗುಣಮುಖರಾದರು.