ನವದೆಹಲಿ: ಕರೋನಾ ವೈರಸ್ ಸೋಂಕನ್ನು ತಡೆಯಲು ಹೇರಲಾಗಿದ್ದ ಲಾಕ್‌ಡೌನ್‌ನಿಂದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವುದರೊಂದಿಗೆ, ಸರ್ಕಾರದ ಆದಾಯ ಮತ್ತು ಜಿಎಸ್‌ಟಿ ಆದಾಯ ಸಂಗ್ರಹದ ಮೇಲೂ ಪರಿಣಾಮ ಬೀರಿದೆ.
ಈ ವರ್ಷದ ಜುಲೈನಲ್ಲಿ 87,422 ಕೋಟಿ ರೂ ಜಿಎಸ್ ಟಿ ಆದಾಯ ಸಂಗ್ರಹವಾಗಿದ್ದರೆ, ಕಳೆದ ವರ್ಷ ಇದೇ ತಿಂಗಳಲ್ಲಿ 1,02,082 ರೂ. ಕೋಟಿ ರೂ ಸಂಗ್ರಹವಾಗಿದೆ. ಅಂದರೆ, ಶೇ 14 ರಷ್ಟು ಆದಾಯ ಕಡಿಮೆಯಾಗಿದೆ.
ಜುಲೈ ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯದಲ್ಲಿ ಸಿಜಿಎಸ್‌ಟಿ 16,147 ಕೋಟಿ ರೂ., ಎಸ್‌ಜಿಎಸ್‌ಟಿ 21,418 ಕೋಟಿ ರೂ., ಐಜಿಎಸ್‌ಟಿ 42,592 ಕೋಟಿ ರೂ. (ಸರಕುಗಳ ಆಮದಿಗೆ ಸಂಗ್ರಹಿಸಿದ 20,324 ಕೋಟಿ ರೂ.ಸೇರಿ) ಮತ್ತು ಹೆಚ್ಚುವರಿ ಕರ(ಸೆಸ್) ರೂ. 7,265 ಕೋಟಿ ರೂ.(ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ 807 ಕೋಟಿ ರೂ. ಸೇರಿದಂತೆ) ಸೇರಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ಶನಿವಾರ ತಿಳಿಸಿದೆ.
ನಿಯಮಿತ ಇತ್ಯರ್ಥದಂತೆ ಸರ್ಕಾರ ಸಿಜಿಎಸ್‌ಟಿಗೆ 23,320 ಕೋಟಿ ರೂ. ಮತ್ತು ಎಸ್‌ಜಿಎಸ್‌ಟಿಗೆ 18,838 ಕೋಟಿ ರೂ.ಇತ್ಯರ್ಥಪಡಿಸಿದೆ. ನಿಯಮಿತ ಇತ್ಯರ್ಥದ ನಂತರ ಜುಲೈನಲ್ಲಿ ಸಿಜಿಎಸ್‍ಟಿಯಿಂದ 39,467 ಕೋಟಿ ರೂ., ಎಸ್‍ಜಿಎಸ್‍ಟಿ ಯಿಂದ 40,256 ಕೋಟಿ ರೂ. ಆದಾಯ ಸಂಗ್ರಹಿಸಲಾಗಿದೆ.
ಕಳೆದ ವರ್ಷದ ಇದೇ ತಿಂಗಳಲ್ಲಿ ಜಿಎಸ್‌ಟಿ ಆದಾಯದ ಶೇಕಡಾ 86 ರಷ್ಟು ತಿಂಗಳ ಆದಾಯವಾಗಿದೆ. ತಿಂಗಳಲ್ಲಿ, ಸರಕುಗಳ ಆಮದಿನಿಂದ ಬರುವ ಆದಾಯವು ಶೇಕಡಾ 84 ರಷ್ಟಿತ್ತು ಮತ್ತು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬರುವ ಆದಾಯದ ಶೇಕಡಾ 96 ರಷ್ಟಿತ್ತು. ಈ ಮಧ್ಯೆ, 5 ಕೋಟಿ ರೂ.ಗಿಂತ ಕಡಿಮೆ ವಹಿವಾಟು ಹೊಂದಿರುವ ತೆರಿಗೆದಾರರಿಗೆ ಸೆಪ್ಟೆಂಬರ್ 2020 ರವರೆಗೆ ತೆರಿಗೆ ವಿವರ ಸಲ್ಲಿಕೆಗೆ ಸಮಯಾವಕಾಶ ವಿಸ್ತರಿಸಲಾಗಿದೆ .