ಕಾಸರಗೋಡು: ಪಳ್ಳಿಕ್ಕರೆ ಗ್ರಾಮಪಂಚಾಯತ್ ನಲ್ಲಿ ಆ.8ರಿಂದ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಕೋವಿಡ್ ಸೋಂಕು ಅತ್ಯಧಿಕ ಪ್ರಮಾಣದಲ್ಲಿ ಹರಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಶಾಸಕ ಕೆ.ಕುಂಞÂ ರಾಮನ್ ಅವರ ಸಮಕ್ಷದಲ್ಲಿ ಸೇರಿದ ಗ್ರಾಮ ಪಂಚಾಯತ್ ಜಾಗ್ರತಾ ಸಮಿತಿ, ವ್ಯಾಪಾರಿ ವ್ಯವಸಾಯಿ , ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜಂಟಿ ಸಭೆ ಈ ತೀರ್ಮಾನ ಕೈಗೊಂಡಿದೆ. ಸೋಮವಾರ ಮತ್ತು ಗುರುವಾರ ಮಾತ್ರ ಇಲ್ಲಿ ಅನಿವಾರ್ಯ ಸಾಮಾಗ್ರಿಗಳ ಮಾರಾಟ ಅಂಗಡಿಗಳು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ತೆರೆದು
ಕಾರ್ಯಾಚರಿಸಲಿವೆ. ಮೀನುಮಾರಾಟ ಪೂರ್ಣರೂಪದಲ್ಲಿ ನಿಷೇಧಿಸಲಾಗಿದೆ. ಅನಾವಶ್ಯಕ ಸಂಚಾರಕ್ಕೆ ಅನುಮತಿಯಿಲ್ಲ ಎಂದು ತೀರ್ಮಾನಿಸಲಾಗಿದೆ.