ತಿರುವನಂತಪುರ: ಕೋವಿಡ್ ಸಂದಿಗ್ದತೆಯ ಕಾರಣ ಸಂಚಾರ ಮೊಟಕುಗೊಳಿಸಿ, ಬಳಿಕ ಒಂದಷ್ಟುಸಮಯ ಬಸ್ ಸೇವೆ ಪುನರಾರಂಭಿಸಿದ್ದರೂ ಪ್ರಯಾಣಿಕರಿಲ್ಲದೆ ನಷ್ಟ ಅನುಭವಿಸಿ ಕೊನೆಗೆ ಸಂಚಾರ ನಿಲುಗಡೆಗೊಳಿಸಿದ್ದ ಖಾಸಗಿ ಬಸ್‍ಗಳು ಇಂದಿನಿಂದ(ಆ.1) ಸಂಪೂರ್ಣ ಸೇವೆಯನ್ನು ನಿಲ್ಲಿಸಲು ನಿರ್ಧರಿಸಿವೆ. ಸುಮಾರು 9,000 ಬಸ್ಸುಗಳು ಅನಿರ್ದಿಷ್ಟವಾಗಿ ಸಂಚಾರ ಮೊಟಕುಗೊಳಿಸಲಿದ್ದು ಸರ್ಕಾರಕ್ಕೆ ಜಿ-ಫಾರ್ಮ್ ನೀಡಿದೆ. ಉಳಿದವು ಮುಂದಿನ ದಿನಗಳಲ್ಲಿ ಹಿಂತೆಗೆದುಕೊಳ್ಳುವ ನಿರೀಕ್ಷೆಯಿದೆ.
ವರ್ಷದ ಅಂತ್ಯದವರೆಗೆ ಇಂಧನ ಸಬ್ಸಿಡಿಗಳನ್ನು ಅನುಮತಿಸಿ, ಕಾರ್ಮಿಕರ ಕಲ್ಯಾಣ ನಿಧಿಯನ್ನು ಸರ್ಕಾರದಿಂದ ಪಾವತಿಸಿ ಮತ್ತು ಕನಿಷ್ಠ ಡಿಸೆಂಬರ್ ವರೆಗೆ ರಸ್ತೆ ತೆರಿಗೆಯನ್ನು ತಪ್ಪಿಸಿ ಬಸ್ ಸೇವೆ ಮುಂದುವರಿಯಬೇಕೆಂದು ಬಸ್ ಮಾಲೀಕರು ಬೇಡಿಕೆ ಇರಿಸಿದ್ದರು. ಆದರೆ, ಸಾರಿಗೆ ಇಲಾಖೆ ಡಿಸೆಂಬರ್ ವರೆಗೆ ರಸ್ತೆ ತೆರಿಗೆ ವಿನಾಯಿತಿ ನೀಡುವ ಬೇಡಿಕೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಮತ್ತು ಗಡುವನ್ನು ವಿಸ್ತರಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳಿದೆ. ಪ್ರಯಾಣಿಕರ ಕೊರತೆ ಮತ್ತು ಇಂಧನ ವೆಚ್ಚದಿಂದಾಗಿ ದೈನಂದಿನ ನಷ್ಟ 900 ರೂ. ಉಂಟಾಗುತ್ತಿದೆ. ಬಸ್ ಮಾಲೀಕರಿಗೆ ಇಷ್ಟೊಂದು ನಷ್ಟ ಹೊತ್ತು ಮುಂದುವರಿಯಲು ಸಾಧ್ಯವಿಲ್ಲ ಮತ್ತು ಅದಕ್ಕಾಗಿಯೇ ಸೇವೆಗಳನ್ನು ನಿಲ್ಲಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಏತನ್ಮಧ್ಯೆ, ಕೇರಳ ಸಾರಿಗೆ ಬಸ್ ಗಳು ಇಂದಿನಿಂದ ದೂರ ಪ್ರಯಾಣ ಬಸ್ ಸೇವೆ ಆರಂಭಿಸಲಾಗುವುದೆಂದು ನಿರ್ಧರಿಸಿದ್ದರೂ ಕೊನೆಯ ಕ್ಷಣದಲ್ಲಿ ನಿರ್ಧಾರದಿಂದ ಹೊರಬಂದು ಇನ್ನಷ್ಟು ಕಾಲ ಸಂಚಾರ ನಡೆಸಲಾಗದೆಂದು ಘೀಶಿಸಿರುವರು. ಕೆಬಿಟಿಎ ಅಧಿಕಾರಿಗಳಾದ ಜಾನ್ಸನ್ ಪದಮದನ್ ಮತ್ತು ಗೋಕುಲಂ ಗೊಕುಲ್ ದಾಸ್ ಕೂಡ ಬಿಕ್ಕಟ್ಟು ಬಗೆಹರಿಸಲು ಸರ್ಕಾರ ತೆರಿಗೆ ವಿನಾಯಿತಿ ಸೇರಿದಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿರುವರು.
ಆದರೆ, ಖಾಸಗಿ ಬಸ್‍ಗಳ ತೆರಿಗೆ ಪಾವತಿಸುವ ಗಡುವನ್ನು ಅಕ್ಟೋಬರ್ 14 ಕ್ಕೆ ವಿಸ್ತರಿಸಲಾಗುವುದು ಮತ್ತು ಕಂತುಗಳಲ್ಲಿ ತೆರಿಗೆ ಪಾವತಿಸಲು ಅವಕಾಶ ನೀಡಲಾಗುವುದು. ಸರಕು ಲಾರಿಗಳ ತೆರಿಗೆ ಪಾವತಿಯನ್ನೂ ಸೆಪ್ಟೆಂಬರ್ ವರೆಗೆ ವಿಸ್ತರಿಸಲಾಗಿದೆ ಎಂದು ಸಚಿವರು ಹೇಳಿರುವರು.