ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 66 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 50 ಮಂದಿ ಗುಣಮುಖರಾಗಿದ್ದಾರೆ. 57 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಈ ಪೈಕಿ ಐವರು ಇತರ ರಾಜ್ಯಗಳಿಂದ ಹಾಗು ನಾಲ್ಕು ಮಂದಿ ವಿದೇಶದಿಂದ ಬಂದವರಾಗಿದ್ದಾರೆ.
ವಿವರಗಳು:
57 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದ್ದು, 5 ಮಂದಿಯ ಸಂಪರ್ಕ ಮೂಲ ಪತ್ತೆಯಾಗಿಲ್ಲ. 5 ಮಂದಿ ಇತರ ರಾಜ್ಯಗಳಿಂದ, 4 ಮಂದಿ ವಿದೇಶದಿಂದ ಆಗಮಿಸಿದವರು. ಸೋಂಕು ಬಾಧಿತರ ಪಟ್ಟಿಯಲ್ಲಿ ಇಲ್ಲದೇ ಇರುವ ಕುಂಬಳೆ ಪಂಚಾಯತ್ ನ ಒಬ್ಬರಿಗೂ ಸೋಂಕು ಖಚಿತಾಗಿದ್ದರೂ, ಉಳಿದ ಮಾಹಿತಿಗಳು ಲಭಿಸಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಸಂಪರ್ಕ ಮೂಲ ಪತ್ತೆಯಾಗದೇ ಇರುವವರು
ಕುಂಬಳೆ ಗ್ರಾಮಪಂಚಾಯತ್ ನ 41, ಕುಂಬಡಾಜೆ ಪಂಚಾಯತ್ ನ 24, ಕಾಸರಗೋಡು ನಗರಸಭೆಯ 29, ನೀಲೇಶ್ವರ ನಗರಸಭೆಯ 22, ಚೆರುವತ್ತೂರು ಪಂಚಾಯತ್ ನ 35 ವರ್ಷದ ಪುರುಷರ ಸಂಪರ್ಕ ಮೂಲ ಪತ್ತೆಯಾಗಿಲ್ಲ.
ಪ್ರಾಥಮಿಕ ಸಂಪರ್ಕದಿಂದ ಸೋಂಕು
ಬೆಳ್ಳೂರು ಪಂಚಾಯತ್ ನ 10 ವರ್ಷದ ಬಾಲಕ, 35 ವರ್ಷದ ಪುರುಷ, 53 ವರ್ಷದ ಮಹಿಳೆ, ಚೆಮ್ನಾಡ್ ಪಂಚಾಯತ್ ನ 48,24,22,22 ವರ್ಷದ ಪುರುಷರು, ಕಾರಡ್ಕ ಪಂಚಾಯತ್ ನ 40,50 ವರ್ಷದ ಪುರುಷರು, 30,28,63 ವರ್ಷದ ಮಹಿಳೆಯರು, 10,7,3 ವರ್ಷ ಮಕ್ಕಳು, ಕುಂಬಳೆ ಪಂಚಾಯತ್ ನ 17,25 ವರ್ಷದ ಮಹಿಳೆಯರು, 9 ವರ್ಷದ ಬಾಲಕ, ಮಧೂರು ಪಂಚಾಯತ್ ನ 50 ವರ್ಷದ ಪುರುಷ, ಮಂಗಲ್ಪಾಡಿ ಪಂಚಾಯತ್ ನ 18 ವರ್ಷದ ಯುವತಿ, ಪಳ್ಳಿಕ್ಕರೆ ಪಂಚಾಯತ್ ನ 38,50,33 ವರ್ಷದ ಮಹಿಳೆಯರು, ವರ್ಕಾಡಿ ಪಂಚಾಯತ್ ನ 17 ವರ್ಷದ ಯುವಕ, 47 ವರ್ಷದ ಮಹಿಳೆ, ತ್ರಿಕರಿಪುರ ಪಂಚಾಯತ್ ನ 33 ವರ್ಷದ ಮಹಿಳೆ, ಚೆರುವತ್ತೂರು ಪಂಚಾಯತ್ ನ 37,75 ವರ್ಷದ ಪುರುಷರು, 46 ವರ್ಷದ ಮಹಿಳೆ, ಕಳ್ಳಾರ್ ಪಂಚಾಯತ್ ನ 37, ಕಾಞಂಗಾಡ್ನಗರಸಭೆಯ 35 ವರ್ಷದ ಪುರುಷರು, 18,42 ವರ್ಷದ ಮಹಿಳೆಯರು, ಕಿನಾನೂರು-ಕರಿಂದಳಂ ಪಂಚಾಯತ್ ನ 43,32,49,38 ವರ್ಷದ ಪುರುಷರು, 30,52,58,31,31,50,8 ವರ್ಷದ ಮಹಿಳೆಯರು, ಉದುಮಾ ಪಂಚಾಯತ್ ನ 30,50,31 ವರ್ಷದ ಮಹಿಳೆಯರು, 2 ವರ್ಷದ ಬಾಲಕ ಪ್ರಾಥಮಿಕ ಸಂಪರ್ಕದಿಂದ ಸೋಂಕು ಬಾಧೆಗೊಳಗಾದವರು.
ವಿದೇಶದಿಂದ ಬಂದವರು:
ಯು.ಕೆ.ಯಿಂದ ಆಗಮಿಸಿದ್ದ ಕಾರಡ್ಕ ಪಂಚಾಯತ್ ನ 65 ವರ್ಷದ ಮಹಿಳೆ, ದುಬಾಯಿಯಿಂದ ಬಂದಿದ್ದ ಕಾಸರಗೋಡು ನಗರಸಭೆಯ 49, ಕುಂಬಳೆ ಪಂಚಾಯತ್ ನ 33 ವರ್ಷದ ಪುರುಷರು, ಬದಿಯಡ್ಕ ಪಂಚಾಯತ್ ನ 24 ವರ್ಷದ ಮಹಿಳೆ ಸೋಂಕಿಗೊಳಗಾದವರು.
ಇತರ ರಾಜ್ಯಗಳಿಂದ ಆಗಮಿಸಿದವರು:
ಬೆಂಗಳೂರಿನಿಂದ ಬಂದಿದ್ದ ಕಾರಡ್ಕ ಪಂಚಾಯತ್ ನ 72, ಗೋವಾದಿಂದ ಆಗಮಿಸಿದ್ದ 58 ವರ್ಷದ ಪುರುಷರು, ಮಂಗಳೂರಿನಿಂದ ಬಂದಿದ್ದ ಕುಂಬಡಾಜೆ ಪಂಚಾಯತ್ ನ 34 ವರ್ಷದ ಮಹಿಳೆ, ಅಸ್ಸಾಂ ನಿಂದ ಆಗಮಿಸಿದ್ದ ಪಿಲಿಕೋಡ್ ಪಂಚಾಯತ್ ನ 38, ದಿಲ್ಲಿಯಿಂದ ಬಂದಿದ್ದ ಕಿನಾನೂರು-ಕರಿಂದಳಂ ಪಂಚಾಯತ್ ನ 40 ವರ್ಷದ ಪುರುಷ ಇವರಿಗೆ ಕೋವಿಡ್ ಪಾಸಿಟಿವ್ ಆಗಿದೆ.
ಕೇರಳದಲ್ಲಿ 962 ಮಂದಿಗೆ ಸೋಂಕು :
ರಾಜ್ಯದಲ್ಲಿ ಸೋಮವಾರ 962 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಸೋಮವಾರ 68 ವರ್ಷದ ತಿರುವನಂತಪುರ ನಿವಾಸಿ ಹಾಗು 52 ವರ್ಷದ ಆಲಪ್ಪುಳ ನಿವಾಸಿ ಸಾವಿಗೀಡಾದರು. 815 ಮಂದಿ ಗುಣಮುಖರಾಗಿದ್ದಾರೆ.
801 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ವಿದೇಶದಿಂದ ಬಂದ 55 ಮಂದಿ ಹಾಗು ಇತರ ರಾಜ್ಯಗಳಿಂದ ಬಂದ 85 ಮಂದಿಗೆ, 15 ಮಂದಿ ಆರೋಗ್ಯ ಕಾರ್ಯಕರ್ತರಿಗೆ, 6 ಮಂದಿ ಕೆಎಸ್‍ಇ ಸಿಬ್ಬಂದಿಗಳಿಗೆ ರೋಗ ಬಾಧಿಸಿದೆ.
ರೋಗ ಬಾಧಿತರು : ತಿರುವನಂತಪುರ-205, ಎರ್ನಾಕುಳಂ-106, ಮಲಪ್ಪುರಂ-85, ಕಾಸರಗೋಡು-66, ಕೋಟ್ಟಯಂ-35, ಕೊಲ್ಲಂ-57, ತೃಶ್ಶೂರು-85, ಕಲ್ಲಿಕೋಟೆ-33, ಇಡುಕ್ಕಿ-26, ಆಲಪ್ಪುಳ-101, ಪಾಲ್ಘಾಟ್-59, ಪತ್ತನಂತಿಟ್ಟ-36, ವಯನಾಡು-31, ಕಣ್ಣೂರು-37 ಎಂಬಂತೆ ರೋಗ ಬಾಧಿಸಿದೆ.
ರೋಗ ಮುಕ್ತರು : ತಿರುವನಂತಪುರ-253, ಎರ್ನಾಕುಳಂ-38, ಮಲಪ್ಪುರಂ-38, ಕಾಸರಗೋಡು-50, ಕೋಟ್ಟಯಂ-55, ಕೊಲ್ಲಂ-40, ತೃಶ್ಶೂರು-52, ಕಲ್ಲಿಕೋಟೆ-26, ಇಡುಕ್ಕಿ-54, ಆಲಪ್ಪುಳ-50, ಪಾಲ್ಘಾಟ್-67, ಪತ್ತನಂತಿಟ್ಟ-59, ವಯನಾಡು-8, ಕಣ್ಣೂರು-25 ಮಂದಿ ಬಾಧಿತರು ಗುಣಮುಖರಾಗಿದ್ದಾರೆ.