ಉಪ್ಪಳ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ಶ್ರೀರಾಮ ದೇಗುಲಕ್ಕೆ ಇಂದು(ಅ.5) ನಡೆಯುವ ಶಿಲಾನ್ಯಾಸ ಕಾರ್ಯಕ್ರಮ ಸಮಗ್ರ ಹಿಂದೂ ಸಮಾಜಕ್ಕೆ ಸಂತಸದ,ಹೆಮ್ಮೆಯ ವಿಚಾರ. ಮಂದಿರದ ನಿರ್ಮಾಣ ಕಾರ್ಯಕ್ರಮ ಶೀಘ್ರ ಪೂರ್ಣಗೊಳ್ಳುವಂತಾಗಲಿ, ಆ ಮೂಲಕ ಅದೆಷ್ಟೋ ರಾಮಭಕ್ತರ ಕನಸು ಸಾಕಾರಗೊಳ್ಳುವಂತಾಗಲಿ, ಜೊತೆಗೆ ಸುಭಿಕ್ಷ ಶ್ರೀರಾಮರಾಜ್ಯ ರೂಪುಗೊಳ್ಳಲಿ ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಶುಭಸಂದೇಶದ ಮೂಲಕ ಹಾರೈಸಿದ್ದಾರೆ.