ನವದೆಹಲಿ: ಪಾಕಿಸ್ತಾನದ ಡಾನ್ ಸುದ್ದಿ ವಾಹಿನಿಯನ್ನು ಹ್ಯಾಕ್ ಮಾಡಲಾಗಿದ್ದು ತ್ರಿವರ್ಣ ಧ್ವಜವನ್ನು ಪ್ರಸಾರ ಮಾಡಲಾಗಿದೆ.
ಸುದ್ದಿ ವಾಹಿನಿ ಜಾಹಿರಾತು ಪ್ರಸಾರ ಮಾಡುತ್ತಿದ್ದ ಮಧ್ಯದಲ್ಲಿ ಪರದೆಯ ಮೇಲೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯದ ಜೊತೆ ತ್ರಿವರ್ಣ ಧ್ವಜವನ್ನು ಪ್ರಸಾರ ಮಾಡಲಾಗಿದೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ. ಮಾಧ್ಯಮ ವರದಿಗಳ ಪ್ರಕಾರ ಮಧ್ಯಾಹ್ನ 3:30ಕ್ಕೆ ಪ್ರಸಾರವಾಗಿತ್ತು.
ಡಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, " ಜಾಹಿರಾತು ಪ್ರಕಟಿಸುತ್ತಿದ್ದಾಗ ಏಕಾ ಏಕಿ ಭಾರತದ ತ್ರಿವರ್ಣ ಧ್ವಜ ಕಾಣಿಸಿ ಕೆಲವು ಸಮಯದ ನಂತರ ಕಾಣೆಯಾಯಿತು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ. ಇದಕ್ಕೂ ಮುನ್ನ ಕಳೆದ ತಿಂಗಳಲ್ಲಿ ಪಿಒಕೆ ಸರ್ಕಾರದ ವೆಬ್ ಸೈಟ್ ಕೂಡ ಹ್ಯಾಕ್ ಆಗಿತ್ತು.