ತಿರುವನಂತಪುರ: ತಿರುವನಂತಪುರದ ಸೆಕ್ರೆಟರಿಯೇಟ್ ನಲ್ಲಿ ಬೆಂಕಿ ಆಕಸ್ಮಿಕವಾದ ಐದು ನಿಮಿಷಗಳಲ್ಲಿ ಕೋವಿಡ್ ಕ್ವಾರಂಟೈನ್ ನಲ್ಲಿದ್ದ ಅಧಿಕಾರಿಯೋರ್ವ ಧಾವಿಸಿ ಬಂದಿರುವುದು ಇದೀಗ ಭಾರೀ ಸುದ್ದಿಯಲ್ಲಿದೆ. ಅಗ್ನಿ ಆಕಸ್ಮಿಕ ಸಂಭವಿಸಿದ ಐದು ನಿಮಿಷಗಳಲ್ಲಿ ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ಕಚೇರಿಗೆ ಧಾವಿಸಿದರು. ವರದಿಯ ಪ್ರಕಾರ, ಆತನ ಮೊಬೈಲ್ ಫೆÇೀನ್ ಟವರ್ ಸ್ಥಳವನ್ನು ಪರೀಕ್ಷಿಸಲು ತನಿಖಾ ತಂಡ ನಿರ್ಧರಿಸಿದೆ.
ಕ್ವಾರೆಂಟೈನ್ ಗಾಗಿ ತಮ್ಮ ಮನೆಯಲ್ಲಿ ತಂಗಿದ್ದ ವ್ಯಕ್ತಿ ಮಂಗಳವಾರ ಸಂಜೆ ಸೆಕ್ರಟರಿಯೇಟ್ ನ ಪೆÇ್ರೀಟೋಕಾಲ್ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡ ಐದು ನಿಮಿಷಗಳಲ್ಲಿ ಘಟನಾ ಸ್ಥಳಕ್ಕೆ ಬಂದಿದ್ದರು. 'ವಿಶೇಷ ಶಾಖೆ'ಯ ಸಲಹೆಯ ನಂತರ ಪೆÇಲೀಸ್ ತಂಡವು ಅಧಿಕಾರಿಯ ಮೊಬೈಲ್ ಫೆÇೀನ್ ಟವರ್ ಸ್ಥಳವನ್ನು ಪರೀಕ್ಷಿಸಲು ನಿರ್ಧರಿಸಿತು. ವಿಡಿಯೋ ತುಣುಕನ್ನು ಪರಿಶೀಲಿಸಿದ ನಂತರ ಈ ಅಧಿಕಾರಿಯ ಉಪಸ್ಥಿತಿಯನ್ನು ವಿಶೇಷ ಶಾಖೆಯು ಖಚಿತಪಡಿಸಿದೆ. ಈ ಹಿಂದೆ ಅವರು ಕೊಡಿಯೇರಿ ಬಾಲಕೃಷ್ಣನ್ ಅವರ ವೈಯಕ್ತಿಕ ಸಹಾಯಕರಾಗಿದ್ದರು. ಘಟನೆಯ ದಿನವಷ್ಟೆ ಇವರನ್ನು ಅಗ್ನಿಶಾಮಕ ತನಿಖಾ ತಂಡದಲ್ಲಿ 'ಸೇರಿಸಲಾಗಿತ್ತು ' ಎಂದು ವರದಿಯಾಗಿದೆ.
ಬೆಂಕಿ ಆಕಸ್ಮಿಕ ಘಟನೆಗೆ ಕಚೇರಿಯೊಳಗಿನ ಫ್ಯಾನ್ ನಲ್ಲಿ ಉಂಟಾದ ಶಾರ್ಟ್ ಸಕ್ರ್ಯೂಟ್ ಕಾರಣವೆಂದೂ ಫ್ಯಾನ್‍ನ ತಂತಿ ಮಾತ್ರ ಸುಟ್ಟುಹೋಗಿದೆ ಎಂದು ಅಗ್ನಿಶಾಮಕ ಇಲಾಖೆ ವರದಿ ಮಾಡಿದೆ. ಇತರ ಸ್ವಿಚ್‍ಗಳು ಹಾನಿಗೊಂಡಿದೆ. ವೈರಿಂಗ್ ಗೆ ಹಾನಿಯಾಗಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ. ಈ ಹಿಂದೆ ಲೋಕೋಪಯೋಗಿ ಇಲಾಖೆಯು ಇದೇ ವಿಷಯವನ್ನು ತಿಳಿಸಿತ್ತು. ಆದರೆ, ಅಪಘಾತದಲ್ಲಿ ಕೆಲವು ಫೈಲ್‍ಗಳು ಭಾಗಶಃ ಸುಟ್ಟುಹೋಗಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಯಾವುದೇ ಪ್ರಮುಖ ಫೈಲ್ ಗಳು ಕೂಡ ಹಾನಿಗೊಂಡಿಲ್ಲ ಎಂದು ಸಿಎಂ ತಿಳಿಸಿದ್ದರು. ಎಡಿಜಿಪಿ ಮನೋಜ್ ಅಬ್ರಹಾಂ ನೇತೃತ್ವದ ತಂಡ ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರ ಆಯುಕ್ತರ ನೇತೃತ್ವದ ಮತ್ತೊಂದು ತಂಡ ತನಿಖೆ ನಡೆಸುತ್ತಿದ್ದು, ಒಂದು ವಾರದೊಳಗೆ ವರದಿ ಸಲ್ಲಿಸುವುದಾಗಿ ಸಿಎಂ ಹೇಳಿದ್ದಾರೆ.