ಕುಂಬಳೆ: ಮಣಿಪಾಲ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮುಖ್ಯ ಕಾನೂನು ಅಧಿಕಾರಿ, ಮೂಲತಃ ಕುಂಬಳೆ ನಿವಾಸಿ ದಿ. ಎಚ್. ಹರಿಯಪ್ಪ ಭಟ್ ಅವರ ಧರ್ಮಪತ್ನಿ ಶ್ರೀಮತಿ(78) ಬೆಂಗಳೂರಿನ ಪುತ್ರನ ಮನೆಯಲಲಿ ಶುಕ್ರವಾರ ಅಲ್ಪಕಾಲದ ಅಸೌಖ್ಯದಿಂದ ನಿಧನಹೊಂದಿದರು. ಅವರು ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ತಮ್ಮ ಪತಿ ಕಾಸರಗೋಡಿನಲ್ಲಿ 1979 ರ ವರೆಗೆ ನ್ಯಾಯವಾದಿಯಾಗಿದ್ದ ಅವಧಿಯಲ್ಲಿ ಶ್ರೀಮತಿಯವರು ಕನ್ನಡ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. 1977 ಸೆಪ್ಟೆಂಬರ್ ನಲ್ಲಿ ಕಾಸರಗೋಡಿನಲ್ಲಿ ಜರಗಿದ ಕಾಸರಗೋಡು ತಾಲೂಕು ಕನ್ನಡ ಮಹಿಳಾ ಸಮ್ಮೇಳನದ ಏರ್ಪಾಡಿನಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದರು. ಅಪಾರ ಸಾಹಿತ್ಯ ಪ್ರೇಮಿಯಾಗಿದ್ದ ಇವರು ಅನೇಕ ಪುಸ್ತಕಗಳ ಸಂಗ್ರಹಕಾರರೂ ಆಗಿದ್ದರು.