ಕಾಸರಗೋಡು: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಿಲ್ಲೆಯ ಮೂರು ನದಿಗಳು ಉಕ್ಕಿ ಹರಿಯುತ್ತಿವೆ. ಅನೇಕ ಪ್ರದೇಶಗಳಲ್ಲಿ ಪ್ರವಾಹ ಉಂಟಾಯಿತು. ತೇಜಸ್ವಿನಿ ನದಿ ಉಕ್ಕಿ ಹರಿಯುತ್ತಿದೆ. ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ಪ್ರವಾಹ ಉಂಟಾಯಿತು. ಪ್ರವಾಹ ಪೀಡಿತ ಕರಾವಳಿಯಲ್ಲಿ ಸುಮಾರು 150 ಕುಟುಂಬಗಳನ್ನು ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ. ಇತರ 80 ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಪೆÇರ್ಟ್ ತುರುತ್ತಿ, ಕರಿವೆಳ್ಳೂರ್ ಭಗವತಿ ದೇವಸ್ಥಾನ, ಮುಗು ಶ್ರೀಸುಬ್ರಾಯ ದೇವಸ್ಥಾನ ಪ್ರವಾಹಕ್ಕೆ ಸಿಲುಕಿದೆ. ಕೈಯ್ಯೂರ್ ನದಿಯ ಕೆಳಗಿರುವ ಭಗವತಿ ದೇವಸ್ಥಾನ ನೀರಿನಲ್ಲಿ ಮುಳುಗಿದೆ. ಪುತ್ತಿಗೆ ಹೊಳೆಯ ಪ್ರವಾಹದ ನೀರು ಸುಬ್ರಾಯ ದೇವಸ್ಥಾನವನ್ನು ಭಾಗಶಃ ಮುಳುಗಿಸಿದೆ.
ರಾಜ್ಯದ ಅನೇಕ ಭಾಗಗಳಲ್ಲಿ ತೀವ್ರ ಪ್ರಮಾಣದ ಪ್ರವಾಹ ಅಪಾಯವನ್ನು ಘೋಷಿಸಲಾಗಿದೆ. ಕರ್ನಾಟಕ ಅರಣ್ಯಕ್ಕೆ ತಾಗಿರುವ ಕೊನ್ನಕ್ಕಾಡ್‍ನಲ್ಲಿ ಭೂಕುಸಿತ ಉಂಟಾಗಿದೆ. ಆದರೆ ಜನ ವಸತಿಗಳಿಲ್ಲದಿದ್ದರಿಂದ ಜೀವಹಾನಿಗಳು ಸಂಭವಿಸಿಲ್ಲ. ಮೂತಾಡಿ ಕಾಲೋನಿಯಿಂದ ನಾಲ್ಕು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಮಾಲೋತು ಕಸಬಾ ಸರ್ಕಾರಿ ಶಾಲೆಯಲ್ಲಿ ಅವರಿಗೆ ವಸತಿ ವ್ಯವಸ್ಥೆ ಏರ್ಪಡಿಸಲಾಗಿದೆ. ಚೈತ್ರವಾಹಿನಿ ನದಿಯಲ್ಲಿ ನೀರಿನ ಮಟ್ಟ ಮುಂಜಾನೆ 3 ಗಂಟೆ ಸುಮಾರಿಗೆ ಏರಿಕೆಯಾಗಿತ್ತು. ಕೊನ್ನಕ್ಕಾಡ್ ಭೂಕುಸಿತ ಬೆಟ್ಟಗಳಲ್ಲಿ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಕಾಲಿಕಡವು ಕುನ್ನುಂಕೈ ರಸ್ತೆಯಲ್ಲಿ ಪ್ರವಾಹ ಉಂಟಾಗಿದೆ. ಚಿತ್ತಾರಿಕಲ್ ಪೆÇಲೀಸರು ಮತ್ತು ವೆಸ್ಟ್ ಎಳೇರಿ ಪಂಚಾಯತಿ ಉಪಾಧ್ಯಕ್ಷ ಟಿ.ಕೆ.ಸುಕುಮಾರನ್ ಜನರ ಸ್ಥಳಾಂತರ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಪೆರುಂಬಟ್ಟಾ ಪಡಿತರ ಅಂಗಡಿಯಿಂದ ಆಹಾರ ವಸ್ತುಗಳನ್ನು ತಲಪಿಸಲಾಗಿದೆ. ಮಾಂಗೋಡ್ ನಾರ್ಕಿಲಕ್ಕಾಡ್ ರಸ್ತೆಯಲ್ಲೂ ಪ್ರವಾಹ ಉಂಟಾಗಿದೆ. ಕಂದಾಯ ಅಧಿಕಾರಿಗಳೂ ರಾತ್ರಿ ಘಟನಾ ಸ್ಥಳಕ್ಕೆ ಆಗಮಿಸಿದರು. ಕುಟ್ಟನ್ ನೆಲ್ಲಿಕ್ಕಟ್ಟು, ಮೊತಿರಾ ನೆಲ್ಲಿಕ್ಕಟ್ಟು, ಜಾಯ್, ರಾಜಿ ರಾಘವನ್ ಮೊದಲಾದವರ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಕೊಟ್ಟೋಡಿ ಪಟ್ಟಣ ಸಂಪೂರ್ಣವಾಗಿ ಮುಳುಗಿದೆ. ಕುತ್ತಿಕೋಲ್, ಬೇಡಡ್ಕ, ಪಂಚಾಯಿತಿಗಳಲ್ಲಿ ಭಾರೀ ಮಳೆ ಮುಂದುವರಿದಿದೆ. ಪಯಸ್ವಿನಿ ನದಿ, ಅದರ ಸಮಾಂತರವಾದ ಕರಿಚೇರಿ ನದಿ ಉಕ್ಕಿ ಹರಿಯುತ್ತಿದೆ. ಕಾಸರಗೋಡು ತಳಂಗರೆ ಮತ್ತು ಕೊಪ್ಪಲ್ ಪ್ರದೇಶಗಳೂ ಮುಳುಗಡೆಯಾಗಿದೆ. ಸುಮಾರು 150 ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಅವರನ್ನು ಸ್ಥಳಾಂತರಿಸಲು ಅಧಿಕಾರಿಗಳು ಆದೇಶಿಸಿರುವರು. ಸ್ಥಳಕ್ಕೆ ತಹಶೀಲ್ದಾರ್ ಎ.ವಿ.ರಾಜನ್, ತಳಂಗೆರೆ ಗ್ರಾಮ ಅಧಿಕಾರಿ ಬಾದರುಲ್ ಹುದಾ, ಡಿವೈಎಸ್ಪಿ ಬಾಲಕೃಷ್ಣನ್ ಮತ್ತು ಎಸ್‍ಐ ವಿಪಿನ್ ಭೇಟಿ ನೀಡಿದರು.
ಮಂಜೇಶ್ವರ ತಾಲೂಕು ಪೈವಳಿಕೆ ಗ್ರಾ.ಪಂ.ನ ಬಾಯಾರ್ ಮುಳಿಗದ್ದೆಯಲ್ಲಿ ಬೃಹತ್ ಮಣ್ಣು ಕುಸಿತ ಉಂಟಾಗಿದ್ದು 15 ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಯಿತು. ಜಕಾರಿಯಾ ಅಲಿಯಾಸ್ ಸೆಕ್ಕಿ, ಅಬೂಬಕರ್ ಸಿದ್ದೀಕ್ ಮತ್ತು ಮಹಮ್ಮದ್ ಅಲಿ ಸೇರಿದಂತೆ 15 ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳೀಯರ ನೇತೃತ್ವದಲ್ಲಿ ಸ್ಥಳಾಂತರಿಸಲಾಯಿತು. ಶನಿವಾರ ಮುಂಜಾನೆ ಒಂದು ಗಂಟೆಯ ಸುಮಾರಿಗೆ ಭಾರೀ ಮಳೆಯಿಂದಾಗಿ ಗುಡ್ಡದ ಒಂದು ಭಾಗವು ಮನೆಗಳ ಛಾವಣಿಗಳ ಮೇಲೆ ಕುಸಿಯತೊಡಗಿದ್ದು ಅಪಘಾತ ಮುನ್ಸೂಚನೆ ಅರಿತ ಕುಟುಂಬಗಳು ಸುರಕ್ಷಿತ ಪ್ರದೇಶಕ್ಕೆ ಓಡಿದ್ದರಿಂದ ಅಪಾಯಗಳು ಉಂಟಾಗಲಿಲ್ಲ.
ನೈಸರ್ಗಿಕ ವಿಪತ್ತುಗಳ ಬಗ್ಗೆ ಕ್ರಮ ಕೈಗೊಳ್ಳಲು ತಾಲ್ಲೂಕು ಮಟ್ಟದಲ್ಲಿ 24 ಗಂಟೆಗಳ ನಿಯಂತ್ರಣ ಕೊಠಡಿ ಆರಂಭಗೊಂಡಿದೆ. ಸಾರ್ವಜನಿಕರು ಸಂಪರ್ಕಿಸಬಹುದು. ಕಾಸರಗೋಡು ತಾಲ್ಲೂಕು 04994 230021, ವೆಲ್ಲರಿಕುಂಡು 0467 2242320, ಹೊಸದುರ್ಗ 0467 2204042, ಮಂಜೇಶ್ವರಂ 04998 244044.
ಚಿತ್ರ ಮಾಹಿತಿಗಳು: (1)ಕರಿವೆಳ್ಳೂರು ಭಗವತಿ ದೇವಸ್ಥಾನ ಮುಳುಗಡೆಯಾಗಿರುವುದು,2)(3)ಮುಗು ಸುಬ್ರಾಯ ದೇವಸ್ಥಾನ ಭಾಗಶಃ ಜಲಾವೃತಗೊಂಡಿರುವುದು,4)(5)ಪುತ್ತಿಗೆ ಹೊಳೆಯ ಸನಿಹದ ಮಸಿದಿ ಮುಳುಗಡೆಯಾಗಿರುವುಉದ,5)ತುಂಬಿಹರಿಯುತ್ತಿರುವ ಪುತ್ತಿಗೆ ಹೊಳೆ.)
.............................................................