ಮಂಜೇಶ್ವರ: ಜಗತ್ತಿಗೇ ಅಪ್ಪಳಿಸಿದ ಮಹಾಮಾರಿ ಕೊರೊನಾ ಭಾರತ ದೇಶವನ್ನು ಅತಿಕ್ರಮಿಸಿ ಇದೀಗ ಐದು ತಿಂಗಳು ಹತ್ತಿರವಾಗುತಿದ್ದರೂ ಇನ್ನೆಷ್ಟು ತಿಂಗಳುಗಳು ಈ ಯಾತನೆಯಲ್ಲಿ ಕಳೆಯಬೇಕಾಗಿರಬಹುದೆಂಬುದು ಮಂಜೇಶ್ವರ ಪರಿಸರದ ಆಟೋ ಕಾರ್ಮಿಕರ ಮನದಾಳದ ಪ್ರಶ್ನೆಗೆ ಉತ್ತರವಿಲ್ಲದಂತಾಗಿದೆ.
ಮಂಜೇಶ್ವರದ ಗ್ರಾಮಗಳಲ್ಲೂ ನಗರಗಳಲ್ಲೂ ಬೇಕಾದವರಿಗೆ, ಬೇಕಾದಲ್ಲಿಗೆ ಕರೆದೊಯ್ಯುತ್ತಿದ್ದ ಕೆಳ-ಮಧ್ಯಮ ವರ್ಗದ ಸಂಚಾರ ಸೌಲಭ್ಯವಾದ ಆಟೋ ಇದೀಗ ಯಾವುದೇ ಶಬ್ದವಿಲ್ಲದೆ ಮೌನವಾಗಿ ಕಾರ್ಮಿಕರ ಮನೆ ಮುಂಭಾಗದಲ್ಲೇ ನಿಲುಗಡೆಯಾಗಿದೆ. ಹಾಯ್ ಆಟೋ ... ಎಂಬ ಒಂದೇ ಕೂಗಿಗೆ ಜನರ ಮುಂಬಾಗಕ್ಕೆ ತಲುಪಿ ಅಸಾಧ್ಯವಾಗಿರುವ ದಾರಿಗಳನ್ನು ಕೂಡಾ ಲೆಕ್ಕಿಸದೆ ಹೇಳಿದ ಸ್ಥಳಕ್ಕೆ ಸೇವೆಯನ್ನು ನೀಡುತಿದ್ದ ಆಟೋ ಇದೀಗ ಮತ್ತೆ ನಿಶ್ಚಲವಾಗಿ ಹದಿನೇಳು ದಿವಸಗಳೇ ಕಳೆಯುತ್ತಿದೆ.
ಆರಂಭದ ಮೂರೂ ತಿಂಗಳುಗಳ ಲಾಕ್ ಡೌನ್ ಬಳಿಕ ಆಟೋ ಕಾರ್ಮಿಕರಿಗೆ ಸೇವೆಯನ್ನು ಒದಗಿಸಲು ಕಾಸರಗೋಡು ಜಿಲ್ಲಾಡಳಿತ ಅನುಮತಿಯನ್ನು ನೀಡಿದ್ದರೂ ಮತ್ತೆ ಮಂಜೇಶ್ವರ ಭಾಗಗಳಲ್ಲಿ ಕೊರೊನಾ ಪೀಡಿತರು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಮಂಜೇಶ್ವರ, ಉಪ್ಪಳ , ಕುಂಬಳೆ ಪ್ರದೇಶಗಳನ್ನು ಕಂಟೈನ್ಮೆಂಟ್ ಪ್ರದೇಶವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಮತ್ತೆ ಆಟೋ ರಿಕ್ಷಾ ಕಾರ್ಮಿಕರನ್ನು ಮನೆಯಲ್ಲಿ ಉಳಿಯಬೇಕಾಗಿದೆ.
ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಜಿಲ್ಲಾಡಳಿತ ಅಂಗಡಿಗಳನ್ನು ತೆರೆಯಲು ಅನುಮತಿಯನ್ನು ನೀಡಿದೆ. ಆದರೆ ಅತ್ಯವಶ್ಯಕ ಅಂಗಡಿಗಳ ಮುಂಭಾಗದಲ್ಲಿ ಜನಸಾಗರವೇ ಸೇರುತ್ತಿದೆ. ಇಲ್ಲಿ ಏನು ಕೊರೊನಾ ಬರುವುದಿಲ್ಲವೇ ? ಹಾಗಿದ್ದರೆ ಸರ್ಕಾರದ ಸುತ್ತೋಲೆಯಲ್ಲಿ ಉಲೇಖವಾಗಿರುವ ಕೋವಿಡ್ ನ ಎಲ್ಲಾ ನಿಬಂಧನೆಗಳನ್ನು ಪಾಲಿಸುತ್ತಿರುವ ಆಟೋ ಕಾರ್ಮಿಕರಿಗೆ ಯಾಕಾಗಿ ಸೇವೆಗೆ ಜಿಲ್ಲಾಡಳಿತ ಅನುಮತಿ ನೀಡುವುದಿಲ್ಲ ಎಂದು ಮಂಜೇಶ್ವರ, ಉಪ್ಪಳ ಭಾಗದ ಆಟೋ ಚಾಲಕರ ಯಕ್ಷ ಪ್ರಶ್ನೆ.
ಆಟೋ ಚಾಲಕರಿಗೆ ಕ್ಷೇಮ ನಿಧಿ ಬೋರ್ಡಿನಲ್ಲಿ ಅನುಕೂಲತೆಗಳನ್ನು ನೀಡುವುದಾಗಿ ಜಿಲ್ಲಾಡಳಿತ ಹೇಳಿಕೆಯನ್ನು ನೀಡಿದೆ. ಆದರೆ ಇವರಲ್ಲಿ ಐವತ್ತು ಶೇಕಡಾ ಕಾರ್ಮಿಕರು ಬೋರ್ಡಲ್ಲಿ ಸದಸ್ಯತ್ವವನ್ನು ಪಡೆದವರಲ್ಲ. ಒಂದು ವೇಳೆ ಕ್ಷೇಮ ನಿಧಿ ಬೋರ್ಡಲ್ಲಿ ಸದಸ್ಯರಾದವರಿಗೆ ಎಂಟು ವರ್ಷ ಕಳೆದ ಬಳಿಕವೇ ಸಾಲ ಸೌಲಭ್ಯಗಳು ಲಭಿಸುವವು. ಈ ಕಾರಣದಿಂದ ಹಲವರು ಇದರಲ್ಲಿ ಸದಸ್ಯತ್ವವನ್ನು ಪಡೆದಿಲ್ಲ.
ಬಹುತೇಕ ಆಟೋ ಚಾಲಕರುಗಳು ಸಾಲ ಪಡೆದುಕೊಂಡು ಆಟೋ ರಿಕ್ಷಾವನ್ನು ಖರೀದಿಸಿದವರಾಗಿದ್ದಾರೆ. ಒಂದು ತಿಂಗಳಿನಲ್ಲಿ ಸರಾಸರಿ ಐದು ಸಾವಿರ ರೂಪಾಯಿ ಇವರಿಗೆ ಸಾಲದ ಕಂತು ಕಟ್ಟಲು ಬೇಕಾಗಿಬರುತ್ತದೆ. ಬ್ಯಾಂಕುಗಳಲ್ಲಿ ಕಂತು ಕಟ್ಟಲು ವಿನಾಯಿತಿಯನ್ನು ನೀಡಲಾಗಿದ್ದರೂ ಆಟೋ ಚಾಲಕರು ಪಡೆದ ಸಾಲದ ಫೈನಾನ್ಸ್ ಗಳಲ್ಲಿ ಈ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಇವರು ಸಾಲದ ಕಂತು ಪಾವತಿಸಲೇ ಬೇಕಾಗಿದೆ.
ಆಟೋ ರಿಕ್ಷಾ ಒಂದು ದಿವಸ ನೂರು ಕಿಲೋ ಮೀಟರಿಗಿಂತಲೂ ಅಧಿಕ ಸಂಚರಿಸಿದರೆ ಮಾತ್ರ ಕಾರ್ಮಿಕರಿಗೆ ತಮ್ಮ ಜೀವನವನ್ನು ಮುನ್ನಡೆಸಲು ಸಾಧ್ಯವಿದೆ. ಇದೀಗ ಮಂಜೇಶ್ವರ , ಉಪ್ಪಳಗಳಲ್ಲಿ ಆಟೋ ಮಿಕ್ಕ ಚಾಲಕರುಗಳು ಹತ್ತು ಕಿಲೋ ಮೀಟರ್ ಕೂಡಾ ಸಂಚರಿಸಿಲ್ಲ.
ಇವರಿಗೆ ಒಂದು ದಿನದ ದುಡಿಮೆಯಲ್ಲಿ ಒಂದು ಸಾವಿರ ರೂ. ಲಭಿಸಿದರೆ ಇನ್ನೂರ ಐವತ್ತು ರೂಪಾಯಿ ಸಾಲ ಕಂತಿಗೆ ತೆಗೆದಿಡಬೇಕಾಗಿದೆ. ಇನ್ನೂರ ಐವತ್ತು ರೂ. ಇಂಧನಕ್ಕೆ ಬೇಕಾಗಿ ಬರುತ್ತದೆ. ಮಿಕ್ಕುಳಿಯುವ ಐನೂರು ಮಾತ್ರ ಇವರ ದಿನನಿತ್ಯದ ಖರ್ಚಿಗೆ ಉಳಿಕೆಯಾಗುವಯುದು. ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳನ್ನು ರೆಡ್ ಜೋನ್ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಪಾಕಿರ್ಂಗ್ ಗಳಲ್ಲಿ ರಿಕ್ಷಾ ನಿಲುಗಡೆ ಮಾಡಬಾರದು, ರಸ್ತೆಗಿಳಿದರೆ ಪೆÇೀಲೀಸರ ಅಟ್ಟಹಾಸ ಬೇರೆ ಈ ಹಿನ್ನೆಲೆಯಲ್ಲಿ ಏನುಮಾಡಬೇಕೆಂದು ತೋಚದೆ ರಿಕ್ಷಾ ಕಾರ್ಮಿಕರು ತಮ್ಮ ಅಳಲನ್ನು ಯಾರತ್ತಿರ ಹೇಳುವುದು ಎಂಬ ಸಂಕಟದಲ್ಲಿ ಸಿಲುಕಿದ್ದಾರೆ.
ಅಭಿಮತ 1):
ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಟೋ ರಿಕ್ಷಾವಿಲ್ಲದೆ ಜನರು ಪರದಾಡುವಂತಹ ಪರಿಸ್ಥಿತಿ ಬಂದೊದಗಿದೆ. ಕೊರೊನಾ ಎಂಬ ಮಹಾಮಾರಿ ಯಾ ಹೆಸರಲ್ಲಿ ರಿಕ್ಷಾ ಚಾಲಕರನ್ನು ದಿಗ್ಬಂಧನದಲ್ಲಿರಿಸಿರುವುದು ಖೇದಕರ ,ಇತರರಿಗೆ ನೀಡಿರುವಂತೆ ಮಾನವೀಯತೆಯ ನೆಲೆಯಲ್ಲಿ ರಿಕ್ಷಾ ಚಾಲಕರಿಗೂ ಸೇವೆಗೆ ಅವಕಾಶವನ್ನು ನೀಡಿದ್ದರೆ ಈ ರೀತಿಯ ಸಮಸ್ಯೆ ಉದ್ಬವಿಸುತ್ತಿರಲಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿರುವುದು ಅನಿವಾರ್ಯ.
ಯಾದವ ಬಡಾಜೆ.
ಗ್ರಾ.ಪಂ. ಸದಸ್ಯ
...........................................................................................
ಅಭಿಮತ 2):
ಮಾರ್ಚ್ ಇಪ್ಪತ್ತೆರಡರಿಂದ ಕೇಂದ್ರ ಸರಕಾರದ ಸೂಚನೆಯಂತೆ ಕೋವಿಡ್ ನ ಎಲ್ಲ ನಿಬಾಂಧನೆಗಳನ್ನು ಪಾಲಿಸಿಕೊಂಡು ಬಂದಿದ್ದೇವೆ . ಬಳಿಕ ಜಿಲ್ಲಾಡಳಿತ ಹಲವು ನಿಯಮಾವಳಿಗಳನ್ನು ಪ್ರಾಬಲ್ಯಕ್ಕೆ ತಂದರೂ ಆಟೋ ಕಾರ್ಮಿಕರಿಗೆ ಯಾವುದೇ ಫಲಪ್ರದವಾದ ತೀರ್ಮಾನವನ್ನು ತರದೆ ನಮ್ಮನ್ನು ಮೂಲೆಗೆ ತಳ್ಳಿರುವುದು ಖೇದಕರ . ಇದೀಗ ಮತ್ತೆ ನಮಗೆ ನಿಬರ್ಂಧವನ್ನು ವಿಧಿಸಿದ ಜಿಲ್ಲಾಡಳಿತ ಸೂಕ್ತವಾದ ಸೇವೆಗೆ ಅವಕಾಶವನ್ನು ಕಲ್ಪಿಸಲಿಲ್ಲ. ಜೊತೆಗೆ ಪೆÇಲೀಸರಿಂದಲೂ ಕೂಡಾ ಬೈಗುಳ, ಏಟನ್ನು ಕೂಡ ತಿನ್ನಬೇಕಾದ ಪರಿಸ್ಥಿತಿ ಬಂದೊದಗಿದೆ , ಸಂಬಂಧಪಟ್ಟವರು ತಮ್ಮ ಸಂಕಷ್ಟವನ್ನು ಅರಿತು ಸೂಕ್ತವಾದ ಪರಿಹಾರ ಒದಗಿಸಬೇಕು.
ದೇವದಾಸ್ ತೂಮಿನಾಡು.
ರಿಕ್ಷಾ ಚಾಲಕ.