HEALTH TIPS

ಬಿರುಸಿನ ಮಳೆ ಕಾಸರಗೋಡು ಜಿಲ್ಲೆಗೆ ತಂದಿದೆ ತೀವ್ರ ಬಾಧೆ

    

               ಕಾಸರಗೋಡು: ಸುರಿಯುತ್ತಿರುವ ಬಿರುಸಿನ ಮಳೆ ಕಾಸರಗೋಡು ಜಿಲ್ಲೆಯಲ್ಲಿ ತೀವ್ರ ರೀತಿ ಬಾಧಿಸಿದೆ. 

             ಪ್ರಕೃತಿ ವಿಕೋಪ ವಿಧವಿಧದಲ್ಲಿ ಕಾಡಿದೆ. ಇಬ್ಬರು ಬಲಿಯಾಗಿದ್ದಾರೆ. ನದಿಗಳು ಉಕ್ಕಿ ಹರಿದು ನೆರೆಹಾವಳಿ ತಲೆದೋರಿ ವ್ಯಾಪಕ ನಾಶನಷ್ಟ ಸಂಭವಿಸಿದೆ. 10 ಮನೆಗಳು ಪೂರ್ಣರೂಪದಲ್ಲಿ, 108 ಮನೆಗಳು ಭಾಗಶಃ ಹಾನಿಗೊಂಡಿವೆ. 

             ಮಂಜೇಶ್ವರ ತಾಲೂಕಿನಲ್ಲಿ 22 ಕುಟುಂಬಗಳ 99 ಮಂದಿ ಸದಸ್ಯರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಬಂಬ್ರಾಣ ಬಯಲಿನಲ್ಲಿ ನೆರೆಹಾವಳಿ ಅಧಿಕವಾಗಿದೆ. ಸ್ಥಳೀಯ ಅನೇಕ ಕುಟುಂಬಗಳನ್ನು ಸ್ಥಳಾಂತರಗೊಳಿಸಲಾಗಿದೆ. ಈ ತಾಲೂಕು ಮಟ್ಟದಲ್ಲಿ 7 ಮನೆಗಳು ಪೂರ್ಣರೂಪದಲ್ಲಿ 15, ಮನೆಗಳು ಭಾಗಶಃ ಹಾನಿಗೊಂಡಿವೆ. ಪೈವಳಿಕೆಯಲ್ಲಿ ಗುಡ್ಡದಿಂದ ಮಣ್ಣುಕುಸಿತ ಸಂಭವಿಸಿದ ಪರಿಣಾಮ ಸ್ಥಳೀಯ ಕೆಲವು ಮನೆಗಳ ಮಂದಿಯನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ.  

           ಕಾಸರಗೋಡು ತಾಲೂಕಿನಲ್ಲಿ 206 ಮಂದಿಯನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ತಳಂಗರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಿರುವ ಅಭಯಾರ್ಥಿಗಳ ಶಿಬಿರದಲ್ಲಿ ಮೊದಲ ಹಂತದಲ್ಲಿ 20 ಕುಟುಂಬಗಳ 97 ಮಂದಿ ಸದಸ್ಯರನ್ನು ಸ್ಥಳಾಂತರಿಸಲಾಗಿತ್ತು. ಈಗ 13 ಕುಟುಂಬಗಳ ಸದಸ್ಯರು ಆಸರೆ ಪಡೆದಿದ್ದಾರೆ. 

            ಹೊಸದುರ್ಗ ತಾಲೂಕಿನ ಕಯ್ಯೂರು, ಚೀಮೇನಿ, ಕ್ಲಾಯಿಕ್ಕೋಡು, ಚೆರುವತ್ತೂರು, ನೀಲೇಶ್ವರ,ಪೇರಾಲ್, ಮಡಿಕೈ, ಪುಲ್ಲೂರು, ಪನೆಯಾಲ, ಉದುಮಾ, ಪುದುಕೈ, ನೋರ್ತ್ ತ್ರಿಕರಿಪುರ, ಸೌತ್ ತ್ರಿಕರಿಪುರ, ಪಡನ್ನ, ವಲಿಯಪರಂಬ, ಬಲ್ಲ, ಅಂಬಲತ್ತರ ಗ್ರಾಮಗಳೂ, ತತ್ಸಂಬಂಧಿ ಗ್ರಾಮಪಂಚಾಯತ್ ಗಳೂ ತತ್ತರಿಸಿ ಹೋಗಿವೆ. ಇಲ್ಲಿ ಆರಂಭಿಸಿದ್ದ ಅಭಯಾರ್ಥಿ ಶಿಬಿರಗಳನ್ನು ಈಗ ಕೈಬಿಡಲಾಗಿದೆಯಾದರೂ, ನೆರೆಹಾವಳಿಯ ಹಿನ್ನೆಲೆಯಲ್ಲಿ 915 ಕುಟುಂಬಗಳ 4657 ಮಂದಿ ಸದಸ್ಯರನ್ನು ಅವರವರ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಈ ತಾಲೂಕಿನಲ್ಲಿ 2 ದಿನಗಳ ಅವಧಿಯಲ್ಲಿ 2 ಮನೆಗಳು ಪೂರ್ಣರೂಪದಲ್ಲಿ, 10 ಮನೆಗಳು ಭಾಗಶಃ ಹಾನಿಗೊಂಡಿವೆ. ಈ ರೂಪದಲ್ಲಿ 5.54 ಲಕ್ಷ ರೂ.ನ ನಷ್ಟ ಅಂದಾಜಿಸಲಾಗಿದೆ. 

        ವೆಳ್ಳರಿಕುಂಡ್ ತಾಲೂಕಿನಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಒಂದು ಕೋಟಿ ರೂ.ನ ನಷ್ಟ ಅಂದಾಜಿಸಲಾಗಿದೆ. ಇಲ್ಲಿ ಸದ್ರಿ 2 ಅಭಯಾರ್ಥಿ ಶಿಬಿರಗಳ ಚಟುವಟಿಕೆ ನಡೆಸುತ್ತಿವೆ. 33 ಕುಟುಂಬಗಳ 77 ಮಂದಿ ಸದಸ್ಯರು ಇಲ್ಲಿ ಆಸರೆ ಪಡೆದಿದ್ದಾರೆ. 98 ಮಂದಿಯನ್ನು ಅವರವರ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ವೆಸ್ಟ್ ಏಳೇರಿ ಗ್ರಾಮದಲ್ಲಿ ಗುಡ್ಡದಿಂದ ಮಣ್ಣುಕುಸಿತ ನಡೆದ ಪರಿಣಾಮ ಇಲ್ಲಿನ 2 ಕುಟುಂಬಗಳ 9 ಮಂದಿ ಸದಸ್ಯರನ್ನು ನಾಟೆಕಲ್ಲು ವೃಧ್ಧಾ ಶ್ರಮಕ್ಕೆ ಸ್ಥಳಾಂತರಿಸಲಾಗಿದೆ. ವೆಳ್ಳರಿಕುಂಡ್ ತಾಲೂಕಿನಲ್ಲಿ 50 ಮನೆಗಳಿಗೆ ಹಾನಿಯಾಗಿದೆ.

          ಕಾಸರಗೋಡು ಜಿಲ್ಲೆಯಲ್ಲಿ 370.88 ಲಕ್ಷ ರೂ.ನ ಕೃಷಿನಾಶ 
      ಕಾಸರಗೋಡು : ಬಿರುಸಿನ ಮಳೆಯ ಪರಿಣಾಮ ಜಿಲ್ಲೆಯಲ್ಲಿ 370.88 ಲಕ್ಷ ರೂ.ಮ ಕೃಷಿ ನಾಶ ಸಂಭವಿಸಿದೆ. ರಬ್ಬರ್, ನೇಂದ್ರ ಬಾಳೆ, ಭತ್ತ, ಅಡಕೆ, ಕಾಳುಮೆಣಸು, ಗೆಡ್ಡೆ-ಗೆಣಸು ಸಹಿತ 286.25 ಹೆಕ್ಟೇರ್ ಜಾಗದಲ್ಲಿ ಕೃಷಿ ನಾಶ ಸಂಭವಿಸಿದೆ.         

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries