ಉಪ್ಪಳ: ಮಾನಸಿಕ ಅಸ್ವಸ್ಥನೆಂದು ಗುರುತಿಸಲ್ಪಟ್ಟ ವ್ಯಕ್ತಿಯೊಬ್ಬ ಸಂಬಂಧಿಕಾರದ ನಾಲ್ವರನ್ನು ಕಡಿದು ಕೊಚ್ಚಿ ಕೊಲೆಗೈದ ಘಟನೆ ಸೋಮವಾರ ಸಂಜೆ ಬಾಯಾರು ಸಮೀಪದ ಕನಿಯಾಲ ಸುದೆಂಬಳ ಗುರುಕುಮೇರಿ ಎಂಬಲ್ಲಿ ನಡೆದಿದೆ.
ಸುದೆಂಬಳದ ಸದಾಶಿವ, ವಿಠಲ, ಬಾಬು, ದೇವಕಿ ಕೊಲ್ಲಲ್ಪಟ್ಟ ನತದೃಷ್ಟರು. ಇದೇ ಪರಿಸರದ ಮಾನಸಿಕ ಅಸ್ವಸ್ಥನೆಂದು ಗುರುತಿಸಲ್ಪಟ್ಟ ಉದಯ ಎಂಬಾತ ಇವರು ನಾಲ್ವರನ್ನೂ ಕೊಲೆಗೈದನೆಂದು ಸ್ಥಳೀಯರು ತಿಳಿಸಿದ್ದಾರೆ. ಬಳಿಕ ಸ್ಥಳೀಯರು ಉದಯನನ್ನು ಹಿಡಿದು ಕಟ್ಟಿಹಾಕಿ ಪೋಲೀಸರಿಗೆ ಒಪ್ಪಿಸಿರುವರೆಂದು ತಿಳಿದುಬಂದಿದೆ. ಘಟನೆ ನಡೆಯುತ್ತಿರುವಂತೆ ಉದಯನ ತಾಯಿ ಲಕ್ಷ್ಮೀ ಓಡಿ ಪ್ರಾಣಾಪಾಯದಿಂದ ಪಾರಾದರೆಂದು ತಿಳಿದುಬಂದಿದೆ.