ಪೆರ್ಲ: ಎಣ್ಮಕಜೆ ಪಂಚಾಯತಿಯ ಕಜಂಪಾಡಿ ವಾರ್ಡಿನಲ್ಲಿ ಹತ್ತರಷ್ಟು ಕಾಂಗ್ರೆಸ್ ಕುಟುಂಬಗಳು ಬಿಜೆಪಿ ಸೇರಿದ್ದಾರೆಂಬ ಪ್ರಚಾರ ಮಾಡಿದ ಬಿಜೆಪಿ ಪಂಚಾಯತಿ ಸಮಿತಿಯ ಹೇಳಿಕೆ ಅಪ್ಪಟ ಸುಳ್ಳು ಎಂದು ಜಿಲ್ಲಾ ಕಾಂಗ್ರೆಸ್ಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್. ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರಾದ ಮೂವರನ್ನು ಸುಳ್ಳು ಹೇಳಿ ಬಲಾತ್ಕಾರವಾಗಿ ಕರೆದುತಂದು ಅವರಿಗೆ ಬಿಜೆಪಿಯ ಶಾಲು ಮತ್ತು ಟೋಪಿ ಧರಿಸಿ ಪೆÇೀಟೋ ತೆಗೆದು ಪ್ರಚಾರಮಾಡುವ ಕೀಳು ಮಟ್ಟದ ರಾಜಕೀಯವನ್ನು ಬಿಜೆಪಿ ನಡೆಸಿದೆ. ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷ ಪ್ರಬಲ ಶಕ್ತಿಯಾಗಿರುವುದು ಮತ್ತು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲಬಹುದೆಂಬ ಭಯದಿಂದ ಸ್ಥಳೀಯ ವಾರ್ಡ್ ಸದಸ್ಯೆ ಸುಳ್ಳಿನ ನಾಟಕ ಮಾಡುತ್ತಿದ್ದಾರೆ. ಬಿಜೆಪಿ ಯ ಕೀಳು ಮಟ್ಟದ ರಾಜಕೀಯಕ್ಕೆ ಬಿಜೆಪಿಯ ಮಂಡಲಾಧ್ಯಕ್ಷರು ಸಾಥ್ ನೀಡಿರುವುದು ನಾಚಿಗಗೇಡು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ ಎಸ್ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಸೇರಿದ್ದಾರೆಂದು ಪ್ರಚಾರ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿ ಹೇಳಿಕೆ ನೀಡಿ ಬಿಜೆಪಿ ನೇತಾರರು ಸುಳ್ಳು ಮತ್ತು ಬಲಾತ್ಕಾರದಿಂದ ಶಾಲು ಹಾಕಸಿದರ ಬಗ್ಗೆ ಕಿಡಿಕಾರಿದ್ದಾರೆ. ನಾವು ಅಪ್ಪಟ ಕಾಂಗ್ರೆಸಿಗರೆಂದು ಹೇಳಿಕೆ ನೀಡಿ ರಂಗಕ್ಕೆ ಬಂದಿರುವುದು ಎಣ್ಮಕಜೆ ಬಿಜೆಪಿಯು ಜನಮಧ್ಯದಲ್ಲಿ ಅಪಹಾಸ್ಯರಾಗಿದ್ದಾರೆ.ಕಳೆದ ಇಪ್ಪತ್ತು ವರ್ಷಗಳಲ್ಲಿ ಬಿಜೆಪಿ ಸಹಿತ ಇತರ ಪಕ್ಷಗಳಿಂದ ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದಾರೆ ಹೊರತು ಒಬ್ಬನೇ ಒಬ್ಬ ಕಾರ್ಯಕರ್ತ ಬಿಜೆಪಿ ಸೇರಿಲ್ಲ. ಕಾಂಗ್ರೆಸ್ ನಿಂದ ಬಿಜೆಪಿ ಸೇರಿದ ಯಾರಾದರೊಬ್ಬನ ಹೆಸರು ಹೇಳಲು ತಾಕತ್ತಿದೆಯೆಂದು ಅವರು ಸವಾಲು ಹಾಕಿದ್ದಾರೆ.ವಿನಾ ಕಾರಣ ಪ್ರಚಾರಕ್ಕಾಗಿ ಇಂತಹ ಕೀಲುಮಟ್ಟದ ರಾಜಕೀಯಕ್ಕಿಲಿಯುವಾಗ ಬಿಜೆಪಿಯ ಮಂಡಲ ನೇತಾರರು ವಾಸ್ತವ ಅರಿತು ಕೊಳ್ಳವುದು ಉತ್ತಮವೆಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.