ಕಾಸರಗೋಡು: ಕೋವಿಡ್ 19 ಪ್ರತರೋಧ ಚಟುವಟಿಕೆಗಳ ಅಂಗವಾಗಿ ಕಾಸರಗೋಡು ಜಿಲ್ಲೆಯ ಪಡಿತರ ವ್ಯಾಪಾರಿಗಳಿಗೆ, ಕರಾವಳಿ ಜಾಗ್ರತಾ ಸಮಿತಿ ಸಮುದಾಯ ನೇತಾರರಿಗೆ ಆ.14 ರಂದು ವೀಡಿಯೋ ಕಾನ್ ಫೆರೆನ್ಸ್ ಮೂಲಕ ತರಬೇತಿ ನೀಡಲಾಗುವುದು. ಪಡಿತರ ವ್ಯಾಪಾರಿಗಳಿಗೆ ಬೆಳಗ್ಗೆ 9 ಗಂಟೆಗೆ, ಕರಾವಳಿ ಸಮುದಾಯ ನಾಯಕರಿಗೆ ಮಧ್ಯಾಹ್ನ 2 ಗಂಟೆಗೆ ತರಬೇತಿ ಇರುವುದು. ವಿವಿಧ ಸ್ಥಳೀಯಡಳಿತ ಸಂಸ್ಥೆಗಳಲ್ಲಿ ನೇಮಕಗೊಂಡಿರುವ ಸ್ವಯಂ ಸೇವಕರಿಗೆ ಕೋವಿಡ್ ಪ್ರತಿರೋಧ ಸಂಬಂಧ ತರಬೇತಿ ನೀಡಲಾಗುವುದು.
ಪ್ರತಿರೋಧ ಚಟುವಟಿಕೆಗಳನ್ನು ಪ್ರಬಲ ಗೊಳಿಸುವ ನಿಟ್ಟಿನಲ್ಲಿ ವಾರ್ಡ್ ಮಟ್ಟದ ಜಾಗ್ರತಾ ಸಮಿತಿಗಳನ್ನು ಚುರುಕುಗೊಳಿಸಲಾಗುವುದು. ಮಾಸ್ಟರ್ ಯೋಜನೆ ಪ್ರಕಾರ ಶಿಕ್ಷಕರನ್ನು ಪ್ರತಿರೋಧ ಚಟುವಟಿಕೆಗಳಿಗಾಗಿ ಬಳಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿರುವರು.