ಕೋಝಿಕ್ಕೋಡ್: ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ದೊಡ್ಡ ವಿಮಾನಗಳನ್ನು ಪ್ರಸ್ತುತ ವರ್ಷದ ಮಳೆಗಾಲ ಪೂರ್ಣಗೊಳ್ಳುವವರೆಗೆ ನಿಷೇಧಿಸಿದೆ.
ಕಳೆದ ಶುಕ್ರವಾರ ಭೂತಲ ಸ್ಪರ್ಶಿಸುವ ವೇಳೆ ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನ ಅಪಘಾತಕ್ಕೀಡಾದ ಬಳಿಕ ಕಂಡುಬಂದ ಅಸುರಕ್ಷಿತತೆಯ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವರದಿಗಳ ಪ್ರಕಾರ ಭಾರೀ ಮಳೆಯಾಗುವ ವಿಮಾನ ನಿಲ್ದಾಣಗಳಲ್ಲಿ ವಿಶೇಷ ತಪಾಸಣೆ ನಡೆಸಲು ಡಿಜಿಸಿಎ ನಿರ್ಧರಿಸಿದೆ.
ಕರಿಪ್ಪೂರ್ ನಲ್ಲಿ ಶುಕ್ರವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ. ಆಬಳಿಕ ಇದೀಗ ದೊಡ್ಡ ವಿಮಾನಗಳಿಗೆ ತಾತ್ಕಾಲಿಕ ನಿರ್ಬಂಧಗಳನ್ನು ವಿಧಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡು ಇನ್ನೂ 43 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಪ್ರಸ್ತುತ, 15 ಮಕ್ಕಳು ಸೇರಿದಂತೆ 68 ಜನರು ಚಿಕಿತ್ಸೆಯಲ್ಲಿದ್ದಾರೆ. ಈ ಪೈಕಿ 25 ಜನರ ಸ್ಥಿತಿ ಗಂಭೀರ ಸ್ಥಿತಿಯಲ್ಲಿದೆ ಎಂದು ವರದಿಯಾಗಿದೆ.
ಏತನ್ಮಧ್ಯೆ, ಕರಿಪ್ಪೂರ್ ವಿಮಾನ ನಿಲ್ದಾಣ ಭದ್ರತಾ ಲೋಪಗಳನ್ನು ಉಲ್ಲೇಖಿಸಿ ನಾಗರಿಕ ವಿಮಾನಯಾನ ಮಹಾನಿರ್ದೇಶಕ ಅರುಣ್ ಕುಮಾರ್ ಅವರನ್ನು ಸ್ಥಾನೋಚ್ಚಾಟನೆ ಮಾಡುವಂತೆ ಪೈಲಟ್‍ಗಳ ಒಕ್ಕೂಟ ಒತ್ತಾಯಿಸಿದೆ.