HEALTH TIPS

ಮಂಜೇಶ್ವರದ ವಿ.ಹಿಂ.ಪರಿಷತ್ತಿನಿಂದ ಹೊಸಂಗಡಿಯ ಪ್ರೇರಣಾದಲ್ಲಿ ಶ್ರೀರಾಮ ಕರಸೇವಕರಿಗೆ ಗೌರವಾಭಿನಂದನೆ

  
         ಮಂಜೇಶ್ವರ: ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ಹಾಗೂ ದುರ್ಗಾವಾಹಿನಿ ಕಾಸರಗೋಡು ಜಿಲ್ಲೆಯ ಆಶ್ರಯ ದಲ್ಲಿ ಬುಧವಾರ ಜಿಲ್ಲಾ ಕಾರ್ಯಾಲಯ ಹೊಸಂಗಡಿ "ಪ್ರೇರಣಾ "ದಲ್ಲಿ ಅಯೋಧ್ಯೆ ಯಲ್ಲಿನ ಶ್ರೀರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ಜರಗಿದವು. 
         ಬೆಳಿಗ್ಗೆ  ರಕ್ಷಾಬಂಧನ, ಬಳಿಕ ಸಾಮೂಹಿಕ ರಾಮ ತಾರಕ ಮಂತ್ರ ನಡೆದು ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು.  ವಿಜಯ ಪಂಜ ಮಂಗಲ್ಪಾಡಿ ಇವರು ದೀಪ ಪ್ರಜ್ವಲನೆ ಗೈದರು. 1992ರಲ್ಲಿ ಅಯೋಧ್ಯೆಗೆ ಕರಸೇವೆಗೆ ತೆರಳಿದ್ದ ರಾಮ ಸೇವಕರನ್ನು ಆರತಿ ಎತ್ತಿ, ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಪ ಸ್ಮರಣಿಕೆ ಗಳನ್ನು ನೀಡಿ ಗೌರವಿಸಲಾಯಿತು. ಇವರ ಪೈಕಿ ಹಿರಿಯ ಸ್ವಯಂ ಸೇವಕರಾದ ತಿಮ್ಮಪ್ಪ ಭಂಡಾರಿ  ಬೊಳುವಾಯಿ ತಮ್ಮ ಅನುಭವವನ್ನು ಹಂಚಿಕೊಂಡರು.
        ರಾ.ಸ್ವ.ಸಂ.ದ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯವಾಹ ಲೋಕೇಶ್ ಜೋಡುಕಲ್ಲು ಅವರು ಕರಸೇವಕರಾಗಿ ಹೋದವರನ್ನು, "ಶತಮಾನದ ಪುಣ್ಯವಂತರು " ಎಂದು ಹೇಳುತ್ತಾ ಅವರ ಮಾರ್ಗದರ್ಶನದಲ್ಲಿ ನಮ್ಮ ಕಾರ್ಯಕರ್ತರು ಇನ್ನಷ್ಟು ಸಂಘಟನೆಯ ಕಾರ್ಯಗಳಿಗೆ ಕಾರ್ಯೋನ್ಮುಖರಾಗುವಂತೆ ಕರೆನೀಡಿದರು. 
     ವಿ. ಹಿಂ. ಪ. ಜಿಲ್ಲಾ ಕಾರ್ಯದರ್ಶಿ ಉಳುವಾನ ಶಂಕರ್ ಭಟ್ ಸ್ವಾಗತಿಸಿ, ಮಾತೃಶಕ್ತಿ ಪ್ರಮುಖ್ ಮೀರಾ ಆಳ್ವ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಿನಕರ ಹೊಸಂಗಡಿ ಕಾರ್ಯಕ್ರಮ ನಿರ್ವಹಿಸಿದರು. ವಿ. ಹಿಂ. ಪ. ಮೀ0ಜ ಖಂಡ ಸಮಿತಿ ಅಧ್ಯಕ್ಷ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ ವಂದಿಸಿದರು.  ಈ ಸಂದರ್ಭ ದೊಡ್ಡ ಪರದೆಯಲ್ಲಿ ಅಯೋಧ್ಯೆಯ ಭೂಮಿಪೂಜೆಯನ್ನು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು. ವಿ. ಹಿಂ. ಪ. ಕಾರ್ಯಾಧ್ಯಕ್ಷ ಗೋಪಾಲ್ ಶೆಟ್ಟಿ ಅರಿಬೈಲು, ಸತ್ಸಂಗ ಪ್ರಮುಖ್ ಜಯಾನಂದ ಕುಮಾರ್ ಹೊಸದುರ್ಗ, ಬಜರಂಗದಳ ಸಂಯೋಜಕ ಶೈಲೇಶ್ ಅಂಜರೆ, ಸಹಕಾರ್ಯದರ್ಶಿ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಸಹ ಸಂಯೋಜಕ ಪವನ್ ಹೊಸಂಗಡಿ, ಮಂಜೇಶ್ವರ ಪ್ರಖಂಡ ಅಧ್ಯಕ್ಷ ಸುರೇಶ್ ಶೆಟ್ಟಿ ಪರಂಕಿಲ, ಪ್ರಖಂಡ ಕಾರ್ಯದರ್ಶಿ ಯಾದವ ಕೀರ್ತೇಶ್ವರ ಮೊದಲಾದವರು ಉಪಸ್ಥಿತರಿದ್ದರು. ಶಾಂತಿ ಮಂತ್ರ ಜಯಘೋಷದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries