ತಿರುವನಂತಪುರ: ಸಿಪಿಎಂ ಪಕ್ಷದ ಪೋಲೀಟ್ ಬ್ಯುರೋ ಸದಸ್ಯ ಎಂ.ಎ.ಬೇಬಿ ಮತ್ತು ಅವರ ಪತ್ನಿಗೆ ಶುಕ್ರವಾರ ಕೋವಿಡ್ ದೃಢೀಕರಿಸಿರುವುದರೊಂದಿಗೆ ಕೇರಳದಲ್ಲಿ ಮೊದಲ ರಾಜಕೀಯ ವ್ಯಕ್ತಿಗೆ ಸೋಂಕು ಬಾಧಿಸಿರುವ ಪ್ರಕರಣವಾಗಿ ದಾಖಲಾಗಿದೆ. ಎಂ.ಎ.ಬೇಬಿ ಮತ್ತು ಅವರ ಪತ್ನಿ ಬೆಟ್ಟಿ ಅವರಿಗೆ ಕೋವಿಡ್ ಖಚಿತಗೊಂಡಿದೆ. ಇಬ್ಬರನ್ನೂ ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಒಂದು ವಾರದಿಂದ ಇವರಿಬ್ಬರು ನಿರೀಕ್ಷಣೆಯಲ್ಲಿದ್ದರು.