ಕುಂಬಳೆ ಪೋಲಿಸ್ ಠಾಣಾ ಪರಿಸರದ ಮೀಪುರಿ ಸೆಂಟರ್ ನ ಐದರಷ್ಟು ವ್ಯಾಪಾರ ಮಳಿಗೆಗಳ ಶೆಟರ್ ಗಳನ್ನು ಮುರಿದು ಕಳವು ನಡೆಸಿರುವುದು ಕಂಡುಬಂದಿದೆ.
ರೂಬಿ ಗಿಪ್ಟ್ ಸೆಂಟರ್,ಬ್ಯಾಗ್ ಪ್ಯಾಲೆಸ್ ಮೊದಲಾದ ಮಳಿಗೆಗಳಲ್ಲಿ ಕಳವು ನಡೆಸಲಾಗಿದ್ದು ಹಣ ಹಾಗೂ ಮಾರಾಟ ಸರಕುಗಳು ಕಳವಾಗಿದ್ದು ಲಕ್ಷಾಂತರ ರೂ.ನಷ್ಟ ಅಂದಾಜಿಸಲಾಗಿದೆ. ಅಂಗಡಿಗಳಿರುವಲ್ಲಿ ಬೆಳಕಿನ ಕೊರತೆಯಿದ್ದು ಭಾರೀ ಮಳೆಯೂ ಇದ್ದುದರಿಂದ ಹೊರಗಿನ ಜನರ ಗಮನಕ್ಕೆ ತಡವಾಗಿ ಕಳವು ಕ್ರತ್ಯ ಗಮನಕ್ಕೆ ಬಂದಿದೆ.