ಕಾಸರಗೋಡು: ಕೆಎಸ್‍ಆರ್‍ಟಿಸಿ ಡಿಪೋದ ಮೆಕ್ಯಾನಿಕ್ ವಿಭಾಗದ ಉದ್ಯೋಗಿಗೆ ಕೋವಿಡ್ ವೈರಸ್ ಭಾಧಿಸಿರುವುದು ಪತ್ತೆಯಾದ ಬಳಿಕ ಇಬ್ಬರು ನಿರ್ವಾಹಕರಿಗೂ ನಿನ್ನೆ ಸೋಂಕು ಬಾಧಿಸಿರುವುದು ದೃಢಪಟ್ಟಿದೆ. ಇದರೊಂದಿಗೆ, ಡಿಪೆÇೀದಲ್ಲಿ ಸಮುದಾಯ ಹರಡುವಿಕೆ ಉಂಟಾಗಿದೆ ಎಂಬ ಆತಂಕ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ಡಿಪೆÇೀವನ್ನು ಅನಿರ್ದಿಷ್ಟವಾಗಿ ಮುಚ್ಚಲಾಯಿತು. ಕೆಎಸ್‍ಆರ್‍ಟಿಸಿ ಮೇಲಧಿಕಾರಿಗಳ(ಎಂ.ಡಿ) ಶಿಫಾರಸಿನ ಮೇರೆಗೆ ಈ ನಿರ್ಧಾರ ಪ್ರಕಟಿಸಲಾಗಿದೆ. ಕಾಞಂಗಾಡ್ ಯಾಂತ್ರಿಕ ವಿಭಾಗದ ಉದ್ಯೋಗಿಯೊಬ್ಬರಿಗೆ ಕೋವಿಡ್ ನಿನ್ನೆ ಖಚಿತಗೊಂಡಿರುವ ಬೆನ್ನಿಗೆ ಈ ನಿರ್ಧಾರ ಪ್ರಕಟಗೊಂಡಿದೆ.
ಡಿಪೋವನ್ನು ನಿನ್ನೆ ಒಂದು ದಿನ ಮುಚ್ಚಲಾಯಿತು ಮತ್ತು ಸೋಂಕು ನಿಯಂತ್ರಣ ಕ್ರಮ ನಡೆಸಲಾಯಿತು. ಕಾಞಂಗಾಡ್- ಕಾಸರಗೋಡು ಮಾರ್ಗದಲ್ಲಿ ಚಲಿಸುತ್ತಿರುವ ಬಸ್‍ನ ನಿರ್ವಾಹಕರು ತಿರುವನಂತಪುರ ನಿವಾಸಿಗೆ ನಿನ್ನೆ ಸಂಜೆಯ ವರದಿಯಲ್ಲಿ ಕೋವಿಡ್ ದೃಢಪಟ್ಟಿತು. ಇದನ್ನು ಅನುಸರಿಸಿ ನೌಕರರು ಶಾಸಕ ಎನ್‍ಎ ನೆಲ್ಲಿಕುನ್ನು ಅವರಿಗೆ ಮಾಹಿತಿ ನೀಡಿದರು. ಶಾಸಕ ಎಂಡಿಯೊಂದಿಗೆ ಈ ಬಗ್ಗೆ ಚರ್ಚಿಸಿದ ತರುವಾಯ ಡಿಪೋವನ್ನು ಅನಿರ್ಧಿಷ್ಟ ಅವಧಿಗೆ ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಮುದಾಯ ಹಂತ ತಲುಪುವ ಸಾಧ್ಯತೆಯ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಡಿಪೋದ ಸುಮಾರು 400 ಉದ್ಯೋಗಿಗಳನ್ನು ಪ್ರತಿಜನಕ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಜೊತೆಗೆ ಕಾಸರಗೋಡು ಪುರಸಭೆಯಲ್ಲಿ ಡಿಪೋ ವ್ಯಾಪ್ತಿ ಕಂಟೈನ್ಮೆಂಟ್ ವಲಯವೆಂದು ಘೋಷಿಸಲಾಗಿದೆ. ಡಿಪೆÇೀ ಕೂಡ ವ್ಯಾಪ್ತಿಗೆ ಬರಲಿದೆ. ಪುರಸಭೆಯ 38 ವಾರ್ಡ್‍ಗಳಲ್ಲಿ 19 ವಾರ್ಡ್‍ಗಳನ್ನು ಕಂಟೈನ್ಮೆಂಟ್ ವಲಯಗಳಾಗಿ ಘೋಷಿಸಲಾಗಿದೆ. ಆದೇಶವನ್ನು ಹಿಂತೆಗೆದುಕೊಳ್ಳುವವರೆಗೂ ಡಿಪೋ ಮುಚ್ಚಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.