ಮಂಜೇಶ್ವರ: ಹೊಸಂಗಡಿ ಬಿ.ಎಂ.ರಾಮಯ್ಯ ಶೆಟ್ಟಿ ಸ್ಮಾರಕ ಗ್ರಂಥಾಲಯದ ಆಶ್ರಯದಲ್ಲಿ 74ನೇ ಸ್ವಾತಂತ್ರ್ಯೋತ್ಸವ ಕೋವಿಡ್ ಮಾನದಂಡಗಳ ಅನುಸಾರ ನಡೆಯಿತು.
ಗ್ರಂಥಾಲಯದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಮಂಜಯ್ಯಹಿತ್ಲುಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಉಪಾಧ್ಯಕ್ಷ, ಸ್ಥಾಪಕ ಖಜಾಂಜಿ ಕೆ.ಕೃಷ್ಣ ಶೆಟ್ಟಿಗಾರ್ ಧ್ವಜಾರೋಹಣಗೈದರು. ಮಕ್ಕಳ ದೇಶ ಭಕ್ತಿಗೀತೆಗಳೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ ಬಿ.ಎಂ.ಕರುಣಾಕರ ಶೆಟ್ಟಿ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಗ್ರಂಥಾಲಯದ ಕಾರ್ಯದರ್ಶಿ ಗೋವಿಂದ ಶೆಟ್ಟಿಗಾರ್ ಸ್ವಾಗತಿಸಿ, ಗ್ರಂಥಪಾಲಕಿ ರೇಖಾ ಕಮಲಾಕ್ಷ ವಂದಿಸಿದರು.