HEALTH TIPS

ದೇವರ ಸ್ವಂತ ನಾಡಿಗೆ ಕರಾಳ ಶುಕ್ರವಾರ-ಸೂರ್ಯೋದಯದ ಗಾಯ ಮರೆಯುವ ಮುನ್ನ ಅಸ್ತಮಾನದ ಮರೆಯಲ್ಲಿ ಬಂದೆರಗಿದ ಮತ್ತೊಂದು ಆಘಾತ

     

            ತಿರುವನಂತಪುರಂ: ಆಗಸ್ಟ್ 7, 2020. ಈ ದಿನವನ್ನು ಕೇರಳವು ಎಂದಿಗೂ ಮರೆಯುವುದಿಲ್ಲ. ಈ ದಿನ ಮಲಯಾಳಂನಲ್ಲಿ ಎರಡು ದೊಡ್ಡ ದುರಂತಗಳು ಸಂಭವಿಸಿದ್ದು, ಇದರಿಂದಾಗಿ ಅನೇಕ ಜನರು ಸಾವನ್ನಪ್ಪಿದ್ದಾರೆ. ರಾಜಮಲಾ ಭೂಕುಸಿತ ದುರಂತ ಮತ್ತು ಕರಿಪುರ ವಿಮಾನ ಅಪಘಾತ ಕರಾಳ ಶುಕ್ರವಾರಕ್ಕೆ ದುರಂತ ಸಾಕ್ಷಿಯಾಯಿತು.

       ಮುನ್ನಾರ್ ರಾಜಮಲೈನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೂರು ವಿಭಾಗಗಳಲ್ಲಾಗಿ ನೂರರ ಸನಿಹ ಜನರು ಮರಣವಪ್ಪಿರಬೇಕೆಂದು ಶಂಕಿಸಲಾಗಿದೆ. ಇಲ್ಲಿಯ ಚಹಾ ಎಸ್ಟೇಟ್ ಚಟುವಟಿಕೆಗಳ ವಲಯದಲ್ಲಿ ಭೂ ಕುಸಿತ ಉಂಟಾಗಿದ್ದು ಸುಮಾರು 80 ಜನರು ವಾಸಿಸುತ್ತಿದ್ದುದಾಗಿ ತಿಳಿದುಬಂದಿದೆ. 

      ಮುನ್ನಾರ್‍ನಿಂದ 20 ಕಿ.ಮೀ ದೂರದಲ್ಲಿರುವ ರಾಜಮಲೈ ಬಳಿಯ ನೇಮಕಡ್ ವಿಭಾಗದ ಪೆಟ್ಟಿಮುಡಿಯಲ್ಲಿ ಭೂಕುಸಿತ ಸಂಭವಿಸಿದೆ. ಮೂವತ್ತು ಕೋಣೆಗಳ ನಾಲ್ಕು ಕೊಠಡಿಗಳು ಸಂಪೂರ್ಣವಾಗಿ ನಾಶವಾದವು. ಈ ವಲಯಗಳಲ್ಲಿ ಒಟ್ಟು 78 ಜನರು ವಾಸಿಸುತ್ತಿದ್ದರು. ಈವರೆಗೆ 15 ಶವಗಳನ್ನು ಪತ್ತೆಹಚ್ಚಲಾಗಿದೆ. ಈ ಪೈಕಿ 12 ಅಪಘಾತದಿಂದ ರಕ್ಷಿಸಲ್ಪಟ್ಟಿದ್ದಾರೆ. 66 ಜನರು ನಾಪತ್ತೆಯಾಗಿದ್ದಾರೆ.  ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಲ್ಲುಗಳು ಮತ್ತು ಮಣ್ಣಿನಿಂದ ಕೂಡಿ ಭಾರೀ ಮಳೆಗೆ ಕಾರ್ಯಾಚರಣೆಗೆ ತೊಡಕಾಯಿತು. 

          ಶುಕ್ರವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಅಪಘಾತದ ಬಗ್ಗೆ ಹೊರಗಿನ ಪ್ರಪಂಚಕ್ಕೆ ತಿಳಿಯಿತು. ಈ ಘಟನೆ ಕಣ್ಣನ್ ದೇವನ್ ನೇಮಕಡ್ ಎಸ್ಟೇಟ್‍ನ ಪೆಟ್ಟಿಮುಡಿ ವಿಭಾಗದಲ್ಲಿ ನಡೆದಿದೆ. ಪ್ರದೇಶವನ್ನು ಸಂಪರ್ಕಿಸುವ ಪೆರಿಯವರ ಸೇತುವೆ ಕುಸಿದಿದ್ದು, ಮೊದಲ ಹಂತದಲ್ಲಿ ಈ ಪ್ರದೇಶವನ್ನು ತಲುಪಲು ಕಷ್ಟವಾಯಿತು. ಭಾರೀ ಮಳೆ-ಮೋಡದ  ಕಾರಣ ಬೆಳಕು ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಶುಕ್ರವಾರ ರಾತ್ರಿ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

       ಧರೆಗುರುಳಿದ ಲೋಹದ ಹಕ್ಕಿ:

   ಇದರ ಬೆನ್ನಿಗೆ ಶುಕ್ರವಾರ ರಾತ್ರಿ 8ರ ಸುಮಾರಿಗೆ ಕರಿಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರ್ ಇಂಡಿಯಾ ವಿಮಾನ(ದುಬೈ-ಕರಿಪೂರ್) ಅಪಘಾತಕ್ಕೀಡಾಯಿತು. ಅಪಘಾತದಲ್ಲಿ ಪೈಲಟ್ ಸೇರಿದಂತೆ ಹದಿನಾರು ಜನರು ಸಾವನ್ನಪ್ಪಿದ್ದಾರೆ. ಸಿಬ್ಬಂದಿ ಸೇರಿದಂತೆ 192 ಮಂದಿ ವಿಮಾನದಲ್ಲಿದ್ದರು. ಪ್ರಯಾಣಿಕರಲ್ಲಿ 10 ಮಕ್ಕಳು ಸೇರಿದ್ದಾರೆ. ಹಲವಾರು ಜನರು ಗಾಯಗೊಂಡರು. ಹಲವರ ಸ್ಥಿತಿ ಗಂಭೀರವಾಗಿದೆ.

        ಕೇರಳ ಶುಕ್ರವಾರ ಎರಡು ದೊಡ್ಡ ದುರಂತಗಳನ್ನು ಆತಂಕದಿಂದ ನೋಡಿದ್ದು ಎರಡು ಅಪಘಾತಗಳಲ್ಲಿ ಈವರೆಗೆ 31 ಸಾವುಗಳು ದೃಢಪಡಿಸಲಾಗಿದೆ. ಕೋವಿಡ್ ನ ಕರಾಳ ನೆರಳು ಇನ್ನೂ ಹೈರಾಣಗೊಳಿಸುವ ಮಧ್ಯೆ ಎರಡು ಮಹಾ ದುರಂತಗಳು ದೇವರ ನಾಡನ್ನು ಶುಕ್ರವಾರ ಅಕ್ಷರಶಃ ದಿಗ್ಮೂಡಗೊಳಿಸಿತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries