ಕಾಸರಗೋಡು: ಜಿಲ್ಲೆಯಲ್ಲಿ ಸಂಪರ್ಕ ಕಾರಣ ಕೋವಿಡ್ ವ್ಯಾಪಕವಾಗಿ ಹರಡುವಿಕೆಯ ಹಿನ್ನೆಲೆಯಲ್ಲಿ ಮುಂದಿನ 14 ದಿನಗಳ ಅವಧಿ ನಿರ್ಣಾಯಕವಾಗಿರುವ ಹಿನ್ನೆಲೆಯಲ್ಲಿ ಜಿಂ, ಯೋಗ ತರಬೇತಿ ಕೇಂದ್ರಗಳು ತೆರೆದು ಕಾರ್ಯಾಚರಿಸಲು ಅನುಮತಿಯಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿರುವರು. ಬಾಗಿಲು ಮುಚ್ಚಿ ಯೋಗ, ಜಿಂ, ತರಬೇತಿ ನೀಡುವ ಕೇಂದ್ರಗಳಿಗೂ ಈ ಆದೇಶ ಅನ್ವಯವಾಗಿದೆ. ಆದರೆ ಮುಕ್ತ ಪ್ರದೇಶಗಳಲ್ಲಿ ನಡೆಯುವ ತರಬೇತಿಗಳಿಗೆ ಅಡ್ಡಿಯಿಲ್ಲ ಎಂದವರು ತಿಳಿಸಿರುವರು.
ಕಂಟೈನ್ಮೆಂಟ್ ಝೋನ್ ಗಳಲ್ಲಿ ಉದ್ದಿಮೆ ಸಂಸ್ಥೆಗಳು ಚಟುವಟಿಕೆ ನಡೆಸಕೂಡದು:
ಜಿಲ್ಲೆಯ ಕಂಟೈನ್ಮೆಂಟ್ ಝೋನ್ ಗಳಲ್ಲಿ ಉದ್ದಿಮೆ ಸಂಸ್ಥೆಗಳು ತೆರೆದು ಕಾರ್ಯಾಚರಿಸಕೂಡದು ಎಂದು ಜಿಲ್ಲಾಧಿಕಾರಿ ತಿಳಿಸಿರುವರು. ಆದರೆ ಇದೇ ವೇಳೆ ಉದ್ದಿಮೆ ಸಂಸ್ಥೆಯ ಕಟ್ಟಡದ ಒಳಗೇ ವಸತಿ ಹೂಡಿ, ಇತರ ಮಂದಿಯೊಂದಿಗೆ ಸಂಪರ್ಕ ನಡೆಸದೇ ಇರುವ ಕಾರ್ಮಿಕರಿರುವ ಸಂಸ್ಥೆಗಳು ಚಟುವಟಿಕೆ ನಡೆಸಬಹುದು ಎಂದವರು ತಿಳಿಸಿರುವರು.
ಆನ್ ಲೈನ್ ಡೆಲಿವರಿಗೆ ಪೆÇಲೀಸ್ ಅನುಮತಿ ಬೇಕು:
ಕಂಟೈಂನ್ಮೆಂಟ್ ಝೋನ್ ಗಳಲ್ಲಿ ಸಾಮಾಗ್ರಿಗಳ ಆನ್ ಲೈನ್ ಡೆಲಿವರಿ ನಡೆಸುವುದಿದ್ದಲ್ಲಿ ಆಯಾ ಝೋನ್ ಗ ಹೊಣೆ ಹೊತ್ತಿರುವ ಪೆÇಲೀಸ್ ಸಿಬ್ಬಂದಿಯ ಅನುಮತಿ ಪಡೆಯಬೇಕು. ಇತರ ಪ್ರದೇಶಗಳಲ್ಲಿ ಆನ್ ಲೈನ್ ಡೆಲಿವರಿ ನಡೆಸಲು ಅಡ್ಡಿಯಿಲ್ಲ. ಆದರೆ ಡೆಲಿವರಿ ಬಾಯ್ ಮಾಸ್ಕ್, ಗ್ಲೌಸ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಕೆಯನ್ನು ಕಡ್ಡಾಯವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಹೇಳಿರುವರು.
ಪ್ರತಿ ವಾರ್ಡ್ ನಿಂದ ತಲಾ 5 ಕಾರ್ಯಕರ್ತರ ಆಯ್ಕೆ:
ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಪೆÇಲೀಸರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪ್ರತಿ ವಾರ್ಡ್ ನಿಂದ ತಲಾ 5 ಮಂದಿ ಕಾರ್ಯಕರ್ತರನ್ನು ಆಯ್ಕೆ ಮಾಡಲಾಗುವುದು. 25 ರಿಂದ 35 ವರ್ಷ ವಯೋಮಾನದ ಮಂದಿ ಈ ನಿಟ್ಟಿನಲ್ಲಿ ಅರ್ಹರಾಗಿದ್ದು, ಇವರಿಗೆ ಪೆÇಲೀಸರು ತರಬೇತಿ ನೀಡಿ, ಆಯಾ ವಾರ್ಡ್ ಗಳಲ್ಲಿ ಪೆÇಲೀಸ್ ಕಾರ್ಯಕರ್ತರಾಗಿ ಕೋವಿಡ್ ಪ್ರತಿರೋಧ ಚಟುವಟಿಕೆಗಳಿಗೆ ನೇಮಿಸುವರು.