ತಿರುವನಂತಪುರ: ಕೋವಿಡ್ ಸೋಂಕು ತೀವ್ರತೆ, ಪ್ರಾಕೃತಿಕ ವಿಕೋಪಗಳಂತಹ ಸವಾಲುಗಳ ಮಧ್ಯೆಯೂ ರಾಜ್ಯ ಸರ್ಕಾರ ಸರ್ಕಾರಿ ನೌಕರರು ಮತ್ತು ಶಿಕ್ಷಕರಿಗೆ ಓಣಂ ಬೋನಸ್ ನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. 4,000 ರೂ.ಗಳ ಬೋನಸ್ ಮತ್ತು 2,750 ರೂ.ಗಳ ಬೋನಸ್ ನೀಡಲು ಸರ್ಕಾರ ನಿರ್ಧರಿಸಿದೆ.
ಸರ್ಕಾರದ ಪ್ರಾಥಮಿಕ ವೇತನ 27,360 ರೂ.ಗಳವರೆಗೆ ಗಳಿಸುವವರಿಗೆ 4,000 ರೂ.ಗಳ ಬೋನಸ್ ಲಭ್ಯವಾಗಲಿದೆ. ಬೋನಸ್ ಮಿತಿಗಿಂತ ಹೆಚ್ಚು ವೇತನವಿರುವವರಿಗೆ ಹಬ್ಬದ ಬೋನಸ್ 1,000 ರಿಂದ 2,750 ರೂ. ಭತ್ತೆ ಲಭಿಸಲಿದೆ. ಎಲ್ಲಾ ಉದ್ಯೋಗಿಗಳಿಗೆ ಮುಂಗಡವಾಗಿ 15 ಸಾವಿರ ರೂ. ಲಭ್ಯವಾಗಲಿದೆ. ಈ ಮೊತ್ತವು ಮುಂದಿನ ಐದು ತಿಂಗಳೊಳಗೆ ಕಂತು-ಕಂತುಗಳಾಗಿ ಅಕ್ಟೋಬರ್‍ನಿಂದ ಮಾಸಿಕ ಕಂತುಗಳಲ್ಲಿ ಕಡಿತಗೊಳಿಸಲಾಗುತ್ತದೆ.
ಆಗಸ್ಟ್ 31 ರಂದು ಓಣಂ ಆರಂಭಗೊಳ್ಳುತ್ತಿದ್ದು, ವೇತನ ಮತ್ತು ಬೋನಸ್ ಮೊದಲೇ ನೀಡಲಾಗುವುದು ಎಂದು ಹಣಕಾಸು ಸಚಿವ ಥಾಮಸ್ ಐಸಾಕ್ ಈ ಹಿಂದೆ ಹೇಳಿದ್ದರು. ನಿವೃತ್ತರಿಗೆ ಪಿಂಚಣಿ, ಕಲ್ಯಾಣಿ ನಿಧಿ ಪಿಂಚಣಿ ಸುಮಾರು 70 ಲಕ್ಷ ಜನರಿಗೆ ವಿತರಿಸಲಾಗುವುದು.
ಕೋವಿಡ್ -19 ಬಿಕ್ಕಟ್ಟು ರಾಜ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಮಧ್ಯೆ ನೌಕರರು ಮತ್ತು ಶಿಕ್ಷಕರಿಗೆ ಓಣಂ ಬೋನಸ್ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ವಿಶೇಷತೆಯಾಗಿದೆ. ಕೋವಿಡ್ ರಕ್ಷಣಾ ಚಟುವಟಿಕೆಗಳ ಭಾಗವಾಗಿ ರಾಜ್ಯದ ಹೆಚ್ಚಿನ ಸರ್ಕಾರಿ ಕಚೇರಿಗಳು ಮತ್ತು ಸಂಸ್ಥೆಗಳು ಭಾಗಶಃ ಕಾರ್ಯನಿರ್ವಹಿಸುತ್ತಿವೆ.