ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಫೇಸ್‍ಬುಕ್ ಪುಟದಲ್ಲಿ ಮಲಯಾಳಿಗರಿಗೆ ವಾಮನ ಜಯಂತಿಯ ಶುಭಾಶಯ ಸಲ್ಲಿಸಿ ಅಭಿನಂದಿಸಿ ಆಶ್ಚರ್ಯ ಮೂಡಿಸಿದರು. ವಾಮನ- ಮಹಾಬಲಿಯನ್ನು ಮೆಟ್ಟಿಹಾಕುವ ಚಿತ್ರವನ್ನೂ ಪೆÇೀಸ್ಟ್‍ನೊಂದಿಗೆ ಹಂಚಿಕೊಳ್ಳಲಾಗಿದೆ. ವಿಷ್ಣುವಿನ ಐದನೇ ಅವತಾರದ ಜನ್ಮದಿನಾಚರಣೆಯಂದು ನಿಮ್ಮೆಲ್ಲರಿಗೂ ಅಭಿನಂದನೆಗಳು ಎಂದು ಉಲ್ಲೇಖಿಸಲಾಗಿದೆ. ಕೇಜ್ರಿವಾಲ್ ಅವರ ಪೆÇೀಸ್ಟ್ "ವಿಷ್ಣುವಿನ ಆಶೀರ್ವಾದ ನಿಮ್ಮೆಲ್ಲರ ಮೇಲಿರಲಿ" ಎoದು ಒಕ್ಕಣೆ ಬರೆದಿರುವುದು.
ಮಹಾಬಲಿ ನಮ್ಮ ನಾಯಕ ಎಂಬ ಕಾಮೆಂಟ್ ಗಳೂ ವ್ಯಕ್ತವಾಗಿದೆ. ನಾಲ್ಕು ವರ್ಷಗಳ ಹಿಂದೆ ಅಮಿತ್ ಶಾ ಹಂಚಿಕೊಂಡ ಅದೇ ಚಿತ್ರವನ್ನು ಈ ಬಾರಿ ಕೇಜ್ರಿವಾಲ್ ಹಂಚಿಕೊಂಡಿದ್ದಾರೆ. ಓಣಂ ನ್ನು ವಾಮನ ಜಯಂತಿ ಎಂದು ಸಂಘ ಪರಿವಾರ ಅಭಿಯಾನದ ನಂತರ ಅಮಿತ್ ಷಾ ವಾಮನ ಜಯಂತಿಯ ಶುಭ ಹಾರೈಸಿದ್ದರು.Arvind Kejriwal
भगवान विष्णु के पांचवे अवतार प्रभु वामन जी की जयंती पर आप सभी को शुभकामनाएं। भगवान विष्णु जी की कृपा आप सभी पर सदा बनी रहे।
ಕೆಲವು ಕಾಮೆಂಟ್‍ಗಳು ...
* ಇದು ರಾಕ್ಷಸರ ಭೂಮಿ, ಕುಬ್ಜರಲ್ಲ. ಮಹಾಬಲಿ ಹೀರೋ
* ಒಬ್ಬ ಒಳ್ಳೆಯ ರಾಜನನ್ನು ಹೊಡೆದು ಪ್ರಪಾತಕ್ಕೆ ಇಳಿಸಿದರೆ ಸಾಲದು. ಈಗ ಅದನ್ನು ಸಮರ್ಥಿಸಲು ಪ್ರಯತ್ನಿಸುತ್ತಿದ್ದೀರಾ?
* ಮಾವೇಲಿಯನ್ನು ನಮ್ಮೊಂದಿಗೆ ಮೆಟ್ಟಿ ಹಾಕಿದವನನ್ನು ಜೈ ಕರೆಯುತ್ತಿದ್ದಾನೆಯೇ? ಮಾವೇಲಿ ಕಿ ಜೈ .. ಈ ಬಾರಿ ಮಾವೇಲಿ ಪಾತಾಳದಿಂದ ಎದ್ದು ಬರುವಾಗ ನಾನಿದನ್ನು ಹೇಳುವೆನು........