HEALTH TIPS

ಶ್ರೀಲಂಕಾದಲ್ಲಿ ಸಹೋದರರ ಸರ್ಕಾರ, ಅಣ್ಣ ಪಿಎಂ-ತಮ್ಮ ರಾಷ್ಟ್ರಪತಿ!

      ಕೊಲಂಬೋ: ಶ್ರೀಲಂಕಾದಲ್ಲಿ ಸಹೋದರರ ಸರ್ಕಾರ ಅಸ್ತಿತ್ವಕ್ಕೆ  ಬಂದಿದೆ.ಅಣ್ಣಾ ಮಹಿಂದಾ ಪ್ರಧಾನಿ,ಅವರ ಸಹೋದರ ದೇಶದ ರಾಷ್ಟ್ರಪತಿ .!  

     ಏಷ್ಯಾದಲ್ಲಿ ದೀರ್ಘಾವಧಿಗೆ ಆಡಳಿತ ನಡೆಸಿದ ಖ್ಯಾತಿ ಹೊಂದಿರುವ ರಾಜಪಕ್ಸೆ ಮತ್ತೆ ಅಧಿಕಾರಕ್ಕೆ ಮರಳಿದ್ದಾರೆ. ಭಾನುವಾರದಂದು ಶ್ರೀಲಂಕಾದ ಪ್ರಧಾನಮಂತ್ರಿಯಾಗಿ ರಾಜಪಕ್ಸೆ ಪ್ರಮಾಣ ವಚನ ಸ್ವೀಕರಿಸಿದರು. ಲಂಕಾದ ರಾಷ್ಟ್ರಪತಿ, ಮಹೀಂದ್ರಾ ಅವರ ಕಿರಿಯ ಸೋದರ ಗೋಟಬಯ ರಾಜಪಕ್ಸೆ ಅವರು ಮಹೀಂದಾ  ಪ್ರತಿಜ್ಞಾವಿಧಿ ಬೋಧಿಸಿದರು.

     ಕೊಲಂಬೋದಾ ಬೌದ್ಧ ದೇಗುಲದಲ್ಲಿ ನಡೆದ ಸಮಾರಂಭದಲ್ಲಿ ನಾಲ್ಕನೇ ಬಾರಿಗೆ ಪ್ರಧಾನಿಯಾಗಿ ಮಹೀಂದಾ ಪ್ರಮಾಣ ವಚನ ಸ್ವೀಕರಿಸಿದರು. ರಾಜಪಕ್ಸೆ ಕುಟುಂಬದ ಐದು ಮಂದಿ ಸಂಸದರಾಗಿದ್ದಾರೆ. ಪ್ರಧಾನಿ ಮಹೀಂದಾ ಅವರ ಪುತ್ರ ನಮಲ್, ಸೋದರ ಚಮಲ್ ಹಾಗೂ ಅವರ ಮಗ ಸಶೀಂದ್ರ, ಸೋದರ ಸಂಬಂಧಿ ನಿಪುಣ ರಣವಾಕ ಎಲ್ಲರೂ ಸಂಸದರಾಗಿದ್ದಾರೆ.

    ಶ್ರೀಲಂಕಾ ಪ್ರಧಾನಿ ಮಹಿಂದ ರಾಜಪಕ್ಸೆ ಪಕ್ಷವಾದ ಎಸ್ಎಲ್ಪಿಪಿ ಭಾರಿ ಅಂತರದಲ್ಲಿ ಜಯಭೇರಿ ಬಾರಿಸಿ, ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. 225 ಸದಸ್ಯ ಬಲದ ಶ್ರೀಲಂಕಾ ಸಂಸತ್ಗೆ ಆಗಸ್ಟ್ 5 ರಂದು ಚುನಾವಣೆ ನಡೆದಿತ್ತು. ಕೊರೊನಾ ಸೋಂಕು ಹರಡುತ್ತಿದ್ದ ಹಿನ್ನೆಲೆಯಲ್ಲಿ ಎರಡು ಬಾರಿ ಚುನಾವಣೆ  ಮುಂದೂಡಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries