ಕಾಸರಗೋಡು : ಬಿರುಸಿನ ಮಳೆಗೆ ಭಾನುವಾರವೂ ಕಾಸರಗೋಡು ಜಿಲ್ಲೆಯಲ್ಲಿ ಪ್ರಕೃತಿ ದುರಂತಗಳು ಮುಂದುವರಿದಿವೆ. ಜಿಲ್ಲಾ ದುರಂತ ನಿವಾರಣೆ ಪ್ರಾಧಿಕಾರದ ಮೇಲ್ನೋಟದಲ್ಲಿ ಸಂರಕ್ಷಣೆ ಮತ್ತು ಪರಿಹಾರ ಕಾರ್ಯಗಳೂ ಸಂದರ್ಭೋಚಿತವಾಗಿ ನಡೆಯುತ್ತಿವೆ.
ಕಾಯಂಗೋಡು ತೇಜಸ್ವಿನಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ವೆಳ್ಳರಿಕುಂಡ್ ತಾಲೂಕು ವ್ಯಾಪ್ತಿಯಲ್ಲಿ ನೆರೆ ಹಾವಳಿ ತೀವ್ರವಾಗಿದೆ. ಇಲ್ಲಿನ 34 ಕುಟುಂಬದ ಸದಸ್ಯರನ್ನು ಸುರಕ್ಷಿತ ತಾಣಗಳಿಗೆ ವರ್ಗಾಯಿಸಲಾಗಿದೆ. ಕಿನಾನೂರು ಗ್ರಾಮದ 18 ಕುಟುಂಬಗಳ ಸದಸ್ಯರನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಇವರಲ್ಲಿ 10 ಮಂದಿ ಪುರುಷರು, 7 ಮಂದಿ ಮಹಿಳೆಯರು, ಒಂದು ಮಗು ಇದ್ದಾರೆ. ಕರಿಂದಳಂ ಗ್ರಾಮದ 4 ಕುಟುಂಬಗಳ ಸದಸ್ಯರನ್ನು ಸ್ಥಳಾಂತರಿಸಲಾಗಿದೆ.
ಚೈತ್ರ ವಾಹಿನಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಮಾಲೋತ್ ಗ್ರಾಮದಲ್ಲಿ 25 ಕುಟುಂಬಗಳ ಸದಸ್ಯರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಇವರಲ್ಲಿ 39 ಮಹಿಳೆಯರು, 21 ಪುರುಷರು, 7 ಮಕ್ಕಳೂ ಇದ್ದಾರೆ.
ಕಳೆದ 24 ತಾಸು ಅವಧಿಯಲ್ಲಿ ವೆಳ್ಳರಿಕುಂಡ್ ತಾಲೂಕು ಮಟ್ಟದಲ್ಲಿ 85 ಮಿ.ಮೀ. ಮಳೆ ಸುರಿದಿದೆ.
ಹಳ್ಳದಲ್ಲಿ ಯುವತಿಯ ಮೃತದೇಹ ಪತ್ತೆ
ಕಾಸರಗೋಡು, ಆ.9: ಕಳ್ಳಾರ್ ಗ್ರಾಮದ ಕಾಂಞ ರತ್ತಡಿ ನಿವಾಸಿ ನಾರಾಯಣನ್ ನಾಯರ್ ಎಂಬವರ ಪುತ್ರಿ ಶ್ರೀ ಲಕ್ಷ್ಮಿ(26) ಎಂಬವರ ಮೃತದೇಹ ಭಾನುವಾರ ಮನೆಯ ಬಳಿಯ ಹಳ್ಳದಲ್ಲಿ ಪತ್ತೆಯಾಗಿದೆ. ಶನಿವಾರ ಸಂಜೆಯಿಂದ ನಾಪತ್ತೆಯಗಿದ್ದರು. ಬಿರುಸಿನ ಮಳೆಗೆ ಕಾಲುಜಾರಿ ಬಿದ್ದು ಮೃತಪಟ್ಟಿರಬಹುದೆಂದು ಪೆÇಲೀಸರು ಶಂಕಿಸಿದ್ದಾರೆ. ಸಾರ್ವಜನಿಕರು ಅಗ್ನಿಶಾಮಕದಳ ನಡೆಸಿದ ಹುಡುಕಾಟದಲ್ಲಿ ಮೃತದೇಹ ಪತ್ತೆಯಾಗಿತ್ತು.