ಮಧೂರು: ಕುಂಬಳೆ ಸೀಮೆಯ ಪ್ರಧಾನ ದೇವಾಲಯಗಳಲ್ಲಿ ಒಂದಾಗಿರುವ ಮಧೂರು ಶ್ರೀಮಹಾಗಣಪತಿ ಸಿದ್ದಿವಿನಾಯಕ ದೇವಾಲಯದ ಪಕ್ಕದಲ್ಲಿ ಹರಿಯುತ್ತಿರುವ ಮಧುವಾಹಿನಿ ಹೊಳೆ ವರ್ಷಂಪ್ರತಿ ಭಾರೀ ಮಳೆಗೆ ಉಕ್ಕಿ ಹರಿದು ಶ್ರೀಕ್ಷೇತ್ರಾಂಗಣ ಪ್ರವೇಶಿಸುವುದು ವಾಡಿಕೆ.
ಕೆಲವು ದಿನಗಳಿಂದ ಸುರಿಯುತ್ತಿರುವ ಬಿರುಸು ಮಳೆಯಿಂದ ಮಧುವಾಹಿನಿ ಮ್ಯೆದುಂಬಿದ್ದು ಭಾನುವಾರ ನದಿಯ ನೀರು ಕ್ಷೇತ್ರಾಂಗಣ ಪ್ರವೇಶಿಸಿತು. ಕ್ಷೇತ್ರ ಅರ್ಚಕರು,ಸಿಬ್ಬಂದಿಗಳು ನೀರನ್ನು ದಾಟಿ ಒಳಪ್ರವೇಶಿಸಿ ನಿತ್ತ ನ್ಯೆಮಿತ್ತಿಕಗಳನ್ನು ನಿರ್ವಹಿಸಿದರು.