HEALTH TIPS

ಮಾನ್ಸೂನ್‍ನ ಮೊದಲಾರ್ಧದಲ್ಲಿ ಕೇರಳದಲ್ಲಿ ಮಳೆ ಕಡಿಮೆ- ಮುಂದಿನ ದಿನಗಳಲ್ಲಿ ಭಾರಿ ಮಳೆಯ ಮುನ್ಸೂಚನೆ


      ತಿರುವನಂತಪುರ: ಕೇರಳ ಮತ್ತು ಕರ್ನಾಟಕ ತೀರ ಪ್ರದೇಶದಲ್ಲಿ ಭಾನುವಾರದಿಂದ ಮೂರು ದಿನಗಳವರೆಗೆ ಬಲವಾದ ಗಾಳಿ ಬೀಸುವ ನಿರೀಕ್ಷೆಯಿದೆ ಎಮದು ಹವಾಮಾನ ಇಲಾಖೆ ತಿಳಿಸಿದೆ.  ಮೀನುಗಾರರು ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ. ಕೇರಳದಲ್ಲಿ ಪ್ರವಾಹದ ಅಪಾಯವಿರುವುದಾಗಿಯೂ ನಿರೀಕ್ಷಿಸಲಾಗಿದೆ. 
           ಜೊತೆಗೆ ರಾಜ್ಯಾದ್ಯಂತ ಭಾರಿ ಮಳೆ ಮುಂದುವರಿದಿದೆ. ಕೇರಳದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗುವ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅದರೊಂದಿಗೆ, ಮಾನ್ಸೂನ್‍ನ ಮೊದಲಾರ್ಧ ಮುಗಿದಿದೆ. ಈ ಅವಧಿಯಲ್ಲಿ ಕೇರಳದಲ್ಲಿ ಕಡಿಮೆ ಮಳೆಯಾಗಿದೆ.  ಮುಂಗಾರು ಮೊದಲಾರ್ಧದಲ್ಲಿ ಕೇರಳದಲ್ಲಿ ಶೇ. 23 ರಷ್ಟು ಕಡಿಮೆ ಮಳೆಯಾಗಿದೆ. ಮುಂದಿನ ಎರಡು ವಾರಗಳಲ್ಲಿ ಕೇರಳವು ಸಾಮಾನ್ಯ ಮಳೆಗಿಂತ ಹೆಚ್ಚಿನದನ್ನು ಪಡೆಯಲಿದೆ.
        ಜೂನ್‍ನಲ್ಲಿ ಶೇ. 17 ಮಳೆ ಕುಸಿತ: 
     ಮಳೆಗಾಲದಲ್ಲಿ ಬೀಳಬೇಕಿದ್ದ ಅಗತ್ಯದಷ್ಟು ಮಳೆಯ ಪ್ರಮಾಣದಲ್ಲಿ ರಾಜ್ಯದಲ್ಲಿ ಭಾರಿ ಕುಸಿತ ದಾಖಲಾಗಿದೆ. ಮಳೆಗಾಲವು ಜೂನ್ 1 ರಂದು ಪ್ರಾರಂಭವಾದ ಬಳಿಕ ಶನಿವಾರದ ತನಕ 1363 ಮಿ.ಮೀ ಮಳೆಯಾಗುವ ನಿರೀಕ್ಷೆಯಿತ್ತು. ಆದರೆ, ಇದು 1050.1 ಮಿ.ಮೀ ಮಳೆಯಾಗಿದೆ. ಜೂನ್ ಅಂತ್ಯದ ವೇಳೆಗೆ, 17 ಪ್ರತಿಶತದಷ್ಟು ಕುಸಿತ ಕಂಡುಬಂದಿದೆ. 
          ವಿವಿಧ ಜಿಲ್ಲೆಗಳಲ್ಲಿ ಮಳೆ ಕಡಿಮೆ: 
      ಕೇರಳದಲ್ಲಿ ಕೋಝೀಕ್ಕೋಡ್ ಮತ್ತು ಕಣ್ಣೂರು ಜಿಲ್ಲೆ ಹೊರತುಪಡಿಸಿ ಎಲ್ಲಾ ಜಿಲ್ಲೆಗಳು ಸರಾಸರಿ ಮಳೆಗಿಂತ ಕಡಿಮೆ ಮಳೆಯಾಗಿದೆ. ಕೋಝಿಕ್ಕೋಡ್ ನಲ್ಲಿ ಈವರೆಗೆ  1902.6 ಮಿ.ಮೀ ಮತ್ತು ಕಣ್ಣೂರು 1844 ಮಿ.ಮೀ. ಮಳೆಯಾಗಿದೆ. ಅತೀ ಹೆಚ್ಚು ಮಳೆ ಲಭ್ಯವಾಗಿರುವುದು ಕಾಸರಗೋಡು ಜಿಲ್ಲೆಯಲ್ಲಾದರೂ ವಾರ್ಷಿಕ ಬೀಳುವ ಮಳೆಗಿಂತ ಶೇ.5 ಕಡಿಮೆ ಎಂದು ಅಧಿಕೃತರು ತಿಳಿಸಿದ್ದಾರೆ. ಕಾಸರಗೋಡು ಜಿಲ್ಲೆಗೆ ಎರಡು ತಿಂಗಳಲ್ಲಿ 1937.1 ಮಿ.ಮೀ ಮಳೆಯಾಗಿದೆ. ಸಾಮಾನ್ಯ ಮಳೆ 2040.6 ಮಿ.ಮೀ. ಕಡಿಮೆ ಇದೆ.
                ಇಡುಕ್ಕಿ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಕಡಿಮೆ ಮಳೆ: 
       ಗುಡ್ಡಗಾಡು ಜಿಲ್ಲೆಗಳಾದ ಇಡುಕ್ಕಿ ಮತ್ತು ವಯನಾಡ್ ರಾಜ್ಯದಲ್ಲಿ ಅತಿ ಕಡಿಮೆ ಮಳೆಯಾಗಿದೆ. ವಯನಾಡದಲ್ಲಿ 1719.5 ಮಿ.ಮೀ ಮಳೆಯಾಗುವ ನಿರೀಕ್ಷೆಯಿತ್ತು. ಆದರೆ, ಒಟ್ಟು ಮಳೆ 719.7 ಮಿ.ಮೀ. ಮಳೆಯಾಗಿದ್ದು 58 ರಷ್ಟು ಕುಸಿತ ಕಂಡಿದೆ. ಇಡುಕಿಗೆ 923.5 ಮಿ.ಮೀ ಮಳೆಯಾಗಿದೆ. 1661.7 ಮಿ.ಮೀ ಮಳೆಯಾಗುವ ನಿರೀಕ್ಷೆಯಿದೆ. ಇದರೊಂದಿಗೆ ಇಡುಕ್ಕಿಗೆ ಶೇ. 44 ಕಡಿಮೆ ಮಳೆಯಾಗಿದೆ.
                    ಮುಂದಿನ ವಾರ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ನಿಮ್ನತೆ: 
      ಮುಂದಿನ ವಾರ ಒಡಿಶಾ ಕರಾವಳಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ನಿಮ್ನತೆಯ ಸಾಧ್ಯತೆ ಇದೆ. ಅದರ ಬಳಿಕ ಮತ್ತೊಂದು ಕಡಿಮೆ ಒತ್ತಡವು ರೂಪುಗೊಳ್ಳುತ್ತದೆ. ಆದರೂ ಎರಡನೇ ನಿಮ್ನ ಒತ್ತಡವು ಹೆಚ್ಚು ಬಲಗೊಳ್ಳುವ ಸಾಧ್ಯತೆಯಿಲ್ಲ. ಆದರೆ, ಕೇರಳದಲ್ಲಿ ಎರಡು ಕಡಿಮೆ ಒತ್ತಡದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕೇರಳ ಮತ್ತು ಕರ್ನಾಟಕ ತೀರದಲ್ಲಿ ಭಾನುವಾರದಿಂದ ಮೂರು ದಿನಗಳವರೆಗೆ ಬಲವಾದ ಗಾಳಿ ಬೀಸುವ ನಿರೀಕ್ಷೆಯಿದೆ. ಮೀನುಗಾರರು ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ. ಕೇರಳದಲ್ಲಿ ಪ್ರವಾಹದ ಅಪಾಯವನ್ನು ತಳ್ಳಿಹಾಕುವಂತಿಲ್ಲ ಎನ್ನಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries