ಕಾಸರಗೋಡು: ಶ್ರೀ ರಾಮಚಂದ್ರನ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ವಿಶಾಲ ಹಾಗೂ ವೈಭವಪೂರ್ಣ ಶ್ರೀ ರಾಮಚಂದ್ರನ ಮಂದಿರದ ನಿರ್ಮಾಣಕ್ಕಾಗಿ ಆ.5 ರಂದು ಶಿಲಾನ್ಯಾಸ ನೆರವೇರಲಿದ್ದು, ಇದರ ಅಂಗವಾಗಿ ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಆಶ್ರಯದಲ್ಲಿ ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನದಲ್ಲಿ ಕೊರೊನಾ ನಿಬಂಧನೆಗಳಂತೆ ವಿವಿಧ ಕಾರ್ಯಕ್ರಮ ನಡೆಯುವುದು.
ಇಂದು(ಆ.5) ಸಂಜೆ 5 ರಿಂದ ಶ್ರೀ ರಾಮನಾಮ ಸ್ತೋತ್ರ ಪಠಣ, ವಿಶೇಷ ಪೂಜೆ, ದೀಪೆÇೀತ್ಸವ ಮಾದರಿಯಲ್ಲಿ ದೀಪ ಬೆಳಗಿಸಲಾಗುವುದು.