ಕಾಸರಗೋಡು: ಎನ್.ಎಸ್.ಎಸ್. ಸ್ವಯಂ ಸೇವಕರಿಂದ ಬೆಡ್ ಶೀಟ್ ಚಾಲೆಂಜ್ ಕಾರ್ಯಕ್ರಮ ನಡೆಯಿತು.
ಕಾಸರಗೋಡು ಜಿಲ್ಲೆಯ ವಿವಿಧೆಡೆ ಚಟುವಟಿಕೆ ರಂಭಿಸಿರುವ ಕೋವಿಡ್ ಫಸ್ಟ್ ಲೈನ್ ಟ್ರೀಟ್ ಮೆಂಟ್ ಸೆಂಟರ್ಗಳಿಗೆ ಅಗತ್ಯವಿರುವ ತಲೆದಿಂಬು ಮತ್ತು ಹಾಸುವ ಬಟ್ಟೆ ಸಂಗ್ರಹಿಸಿ ವಿತರಿಸುವ ಕಾರ್ಯಕ್ರಮ ಇದಾಗಿದೆ.
ಎನ್.ಎಸ್.ಎಸ್. ಸ್ವಯಂಸೇವಕರು ಈ ನಿಟ್ಟಿನಲ್ಲಿ ಸಂಗ್ರಹಿಸಿದ 5511 ಬೆಡ್ಶೀಟ್, ತಲೆದಿಂಬು ಕವರ್ ಗಳನ್ನು ಕಂದಾಯ ಸಚಿವ ಇ.ಚಂದ್ರಶೇಖರನ್ ಅವರಿಗೆ ಹಸ್ತಾಂತರಿಸಿದರು. ಜಿಲ್ಲೆಯಲ್ಲಿ ಈ ಕಾರ್ಯಕ್ರಮದ ಅಂಗವಾಗಿ ಈಗಾಗಲೇ 358215 ರೂ. ಮೌಲ್ಯದ ಬೆಡ್ಶೀಟ್ ಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ಸಂಬಂಧ ನಡೆದ ಸಮಾರಂಭದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್. ಜಿಲ್ಲಾ ಸಂಚಾಲಕ ವಿ.ಹರಿದಾಸ್, ಪಿ.ಎ.ಸಿ. ಸದಸ್ಯರಾದ ಷಾಹುಲ್ ಹಮೀದ್, ಮಣಿಕಂಠನ್, ಎಂ.ರಾಜೀವನ್, ಸಿ.ಪ್ರವೀಣ್ ಕುಮಾರ್, ಕೆ.ವಿ.ರತೀಶ್, ಎ.ಮಧುಸೂದನ್ ಮೊದಲಾದವರು ಉಪಸ್ಥಿತರಿದ್ದರು.